ಅಯೋಧ್ಯೆಯಲ್ಲಿ (Ayodhya) ಭೂಮಿ ಖರೀದಿ ಮಾಡುವ ಮೂಲಕ ಈ ಹಿಂದೆ ಸುದ್ದಿ ಆಗಿದ್ದರು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan). ಆನಂತರ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲೂ ಭಾಗಿಯಾಗಿ ರಾಮನ ಭಕ್ತಿಯನ್ನು ಮೆರೆದಿದ್ದರು. ಈಗ ಎರಡನೇ ಬಾರಿ ರಾಮಮಂದಿರಕ್ಕೆ (Ram Mandir) ಬಿಗ್ ಬಿ ಭೇಟಿ ನೀಡಿದ್ದಾರೆ.
ನಿನ್ನೆಯಷ್ಟೇ ಜ್ಯುವೆಲರಿ ಶಾಪ್ ಉದ್ಘಾಟನೆಗೆಂದು ಅಯೋಧ್ಯೆಗೆ ಬಂದಿಳಿದಿದ್ದ ಅಮಿತಾಭ್ ಬಚ್ಚನ್, ಅಂಗಡಿ ಉದ್ಘಾಟನೆಗೂ ಮುನ್ನ ರಾಮಮಂದಿರಕ್ಕೆ ಬಂದಿದ್ದಾರೆ. ರಾಮನಿಗೆ ದುಬಾರಿ ಬೆಲೆಯೆ ಬಂಗಾರದ ಒಡವೆಯನ್ನು ನೀಡಿದ್ದಾರೆ.
ಬಿಗ್ ಬಿ ರಾಮಮಂದಿರಕ್ಕೆ ಬರುವ ವಿಷಯ ತಿಳಿಯುತ್ತಿದ್ದಂತೆಯೇ ಅಸಂಖ್ಯಾತ ಅಭಿಮಾನಿಗಳು ಕೂಡ ಆಗಮಿಸಿದ್ದರು. ವಿಶೇಷ ಭದ್ರತೆಯಲ್ಲಿ ಅಮಿತಾಭ್ ಅವರನ್ನು ಕರೆದುಕೊಂಡು ಹೋಗಿ ರಾಮನ ದರ್ಶನ ಮಾಡಿಸಿದ್ದಾರೆ ಆಡಳಿಯ ಮಂಡಳಿಯವರು. ರಾಮನ ವಿಶೇಷ ದರ್ಶನದ ನಂತರ ರಾಮಮಂದಿರದ ಬಗ್ಗೆ ಅಮಿತಾಭ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಅಯೋಧ್ಯೆ ಪುಣ್ಯಭೂಮಿಯಲ್ಲಿ ನೆಲೆಸುವುದಕ್ಕಾಗಿ ಅಮಿತಾಭ್ ಜಮೀನು ಖರೀದಿ ಮಾಡಿದ್ದಾರೆ. ಅಲ್ಲೊಂದು ಭವ್ಯ ಬಂಗಲೆ ನಿರ್ಮಿಸುವ ಕನಸು ಕಟ್ಟಿದ್ದಾರೆ. ಅತೀ ಶೀಘ್ರದಲ್ಲೇ ಮನೆ ಕಟ್ಟುವ ಕೆಲಸವನ್ನೂ ಅವರು ಪ್ರಾರಂಭಿಸಲಿದ್ದಾರಂತೆ.