ವಾಷಿಂಗ್ಟನ್: ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ನಡೆದ ಏರ್‌ಫೋರ್ಸ್ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದಲ್ಲಿ (Air Force Academy Graduation) ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ವೇದಿಕೆಗೆ ಆಗಮಿಸುತ್ತಿದ್ದಂತೆ ಸ್ಟೇಜ್ ಮೇಲೆ ಎಡವಿ ಬಿದ್ದಿದ್ದಾರೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Joe Biden just had a really bad fall at the U.S. Air Force Academy graduation. Falling like this at his age is very serious. Democrats want us to trust him to be the President until Jan, 2029. If we’re being real we all know that’s insane. He’s in no condition to run. pic.twitter.com/wacE0bojb9
— Robby Starbuck (@robbystarbuck) June 1, 2023
Advertisement
ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಬಳಿಕ ಮುಂದಿನ ಹೆಜ್ಜೆ ಇಟ್ಟ ತಕ್ಷಣ ಕಾಲು ತಡವರಿಸಿ ಬಿದ್ದಿದ್ದಾರೆ, ಕೂಡಲೇ ಏರ್‌ಫೋರ್ಸ್ ಅಧಿಕಾರಿಗಳು ಎದ್ದೇಳಲು ಸಹಕರಿಸಿದ್ದಾರೆ. ಎಡವಿ ಬಿದ್ದ 80 ವರ್ಷದ ಬೈಡನ್ ಬಳಿಕ ಡಿಪ್ಲೊಮಾ ಕೆಡೆಟ್‌ಗಳಿಗೆ ಪದವಿ ಪ್ರದಾನಮಾಡಿ, ವೇದಿಕೆಯಿಂದ ಹೊರಗುಳಿದಿದ್ದಾರೆ. ನಂತರ ಅಲ್ಲಿಂದ ಕ್ಷೇಮವಾಗಿ ನಡೆದುಕೊಂಡು ಶ್ವೇತ ಭವನಕ್ಕೆ ತೆರಳಿದರು. ಸದ್ಯ ಅಧ್ಯಕ್ಷರು ಗಾಯಗೊಂಡಿಲ್ಲ, ಫಿಟ್ ಆಗಿದ್ದಾರೆ ಎಂಬುದಾಗಿ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ
Advertisement
He’s fine. There was a sandbag on stage while he was shaking hands. https://t.co/jP4sJiirHh
— Ben LaBolt (@WHCommsDir) June 1, 2023
Advertisement
ಬೈಡನ್ ಇತ್ತೀಚೆಗೆ ಜಪಾನ್‌ನಲ್ಲಿ ನಡೆದ G7 ಶೃಂಗಸಭೆಯಲ್ಲೂ ಎಡವಿದ್ದರು, ಹಿರೋಷಿಮಾದ ಇಟ್ಸುಕುಶಿಮಾ ದೇಗುಲದಲ್ಲಿ ಸಣ್ಣ ಮೆಟ್ಟಿಲುಗಳಲ್ಲಿ ಅವಸರದಿಂದ ಹೋಗುತ್ತಿದ್ದಾಗಲೂ ಎಡವಿ ಬಿದ್ದಿದ್ದರು. ಆದ್ರೆ ಸ್ವತಃ ಮೇಲೆದ್ದಿದ್ದರು. ಇದೀಗ 3ನೇ ಬಾರಿ ಬೈಡನ್ ಎಡವಿ ಬಿದ್ದ ಈ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವರು ಟ್ರೋಲಿಗೆಳೆದಿದ್ದಾರೆ, ಇನ್ನೂ ಕೆಲವರು ಅದು ಕೆಟ್ಟ ಸ್ಥಳವಾಗಿತ್ತೆಂದು ಭಾವಿಸುತ್ತೇವೆ. ಯಾವುದಕ್ಕೂ ನೀವು ಹುಷಾರಾಗಿರಿ ಅಂತಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು
Advertisement
ಬೈಡನ್ ಅಧ್ಯಕ್ಷರ ಅವಧಿ ಇನ್ನೊಂದು ವರ್ಷ ಬಾಕಿಯಿದ್ದು, 2ನೇ ಅವಧಿಗೆ 2024ರಲ್ಲಿ ಮತ್ತೊಮ್ಮೆ ಅಧ್ಯಕ್ಷನ ಪಟ್ಟಕ್ಕೇರಲು ಸಿದ್ಧತೆಯಲ್ಲಿ ತೊಡಗಿದ್ದಾರೆ.