ವಾಷಿಂಗ್ಟನ್: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವಾಷಿಂಗ್ಟನ್ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆಗೆ ಹೊಣೆಗಾರರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದರು.
2018ರಲ್ಲಿ ಖಶೋಗಿಯ ಹತ್ಯೆಯ ನಂತರ ಅವರು ಪರಿಯಾ ಎಂದು ಕರೆದಿದ್ದ ದೇಶದೊಂದಿಗೆ ಸಂಬಂಧವನ್ನು ಮರುಹೊಂದಿಸುವ ಪ್ರವಾಸವನ್ನು ಬೈಡನ್ ಕೈಗಿದ್ದರು. ಈ ವೇಳೆ ಅವರು ಕ್ರೌನ್ ಪ್ರಿನ್ಸ್ ಅವರು ಖಶೋಗಿ ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದರು. ಖಶೋಗಿ ಹತ್ಯೆಗೆ ಸಂಬಂಧಿಸಿದಂತೆ, ನಾನು ಸಭೆಯಲ್ಲಿ ಮಾತನಾಡಿದ್ದೇನೆ. ಆ ಸಮಯದಲ್ಲಿ ನಾನು ಅದರ ಬಗ್ಗೆ ಏನು ಯೋಚಿಸಿದೆ ಮತ್ತು ಈಗ ಅದರ ಬಗ್ಗೆ ಏನು ಯೋಚಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಮಾತನ್ನು ಆರಂಭಿಸಿದರು. ಇದನ್ನೂ ಓದಿ: ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ
Advertisement
Advertisement
ನಾನು ಖಶೋಗಿ ಹತ್ಯೆ ಕುರಿತು ನೇರವಾಗಿ ಚರ್ಚೆ ಮಾಡಿದ್ದೆ. ನಾನು ನನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದೇನೆ. ಒಬ್ಬ ಅಮೇರಿಕ ಅಧ್ಯಕ್ಷರು ಮಾನವ ಹಕ್ಕುಗಳ ವಿಷಯದ ಬಗ್ಗೆ ಮೌನವಾಗಿರುವುದು ಅಸಮಂಜಸವಾಗಿದೆ ಎಂದು ತಿಳಿಸಿದರು.
Advertisement
Advertisement
ಇಸ್ತಾನ್‍ಬುಲ್‍ನಲ್ಲಿ ಸೌದಿ ಏಜೆಂಟರಿಂದ ಹತ್ಯೆಗೀಡಾದ ಮತ್ತು ಛಿದ್ರಗೊಂಡ ವಿಮರ್ಶಕ ಖಶೋಗಿಯನ್ನು ಸೆರೆ ಹಿಡಿಯುವಂತೆ ಕಾರ್ಯಾಚರಣೆಗೆ ಸೌದಿ ಕ್ರೌನ್ ಪ್ರಿನ್ಸ್ ಸಹಾಯ ಮಾಡಿದ್ದರು ಎಂದು ಯುಎಸ್ ಗುಪ್ತಚರ ಹೇಳಿದೆ. ಈಗ ಖಶೋಗಿಗೆ ಏನಾಯಿತು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಧಾರಾಕಾರ ಮಳೆ – ಟಾರ್ಪಲ್ ಬಳಸಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು