ಬೀದರ್: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಅಮಿತ್ ಕೊನೆಗೂ ಜಿಲ್ಲೆಗೆ ಆಗಮಿಸಿದ್ದು, ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಆರತಿ ಮಾಡಿ ಪರಸ್ಪರ ಸಿಹಿ ಹಂಚಿಕೊಂಡು ಕುಟುಂಬಸ್ಥರು ಅಮಿತ್‍ರನ್ನು ಬರಮಾಡಿಕೊಂಡಿದ್ದಾರೆ.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮನೆಗೆ ವಾಪಸ್ ಹೋಗುತ್ತೀವೋ ಇಲ್ಲವೋ ಎಂದು ಪ್ರಾರಂಭದಲ್ಲಿ ಭಯವಾಗುತ್ತಿತ್ತು. ಬಂಕರ್‌ನಲ್ಲಿಯೇ 5 ರಿಂದ 6 ದಿನ ಕಾಲ ಕಳೆದೇವು. ಈ ವೇಳೆ ನಮಗೆ ತಿನ್ನಲು ಅನ್ನ ಸಿಗಲಿಲ್ಲ. ವಾರ್ ನಡೆಯುತ್ತಿತ್ತು. ಆದರೂ ಜೀವ ಕೈಯಲ್ಲಿ ಹಿಡಿದು ಬಂಕರ್ ನಿಂದ 12 ಕೀಲೋ ಮೀಟರ್ ನಡೆದುಕೊಂಡೇ ಖಾರ್ಕಿವ್‍ನ ರೈಲು ನಿಲ್ದಾಣ ತಲುಪಿದೇವು. ನಾವು ಇರುವ ಬಿಲ್ಡಿಂಗ್ ಮೇಲೆ ಬಾಂಬ್‍ಗಳು ಬೀಳುತ್ತಿದ್ದವು. ಇದನ್ನೂ ಓದಿ: 100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ
ಮೊದಲು ಉಕ್ರೇನ್ ಸ್ವರ್ಗದ ತರಹ ಇತ್ತು ಈಗ ನರಕವಾಗಿದೆ. ಸಾವನ್ನಪ್ಪಿದ ನವೀನ್ ಹಾಗೂ ನಾನು ಒಂದೇ ಕಾಲೇಜು. ನಮ್ಮ ಸೀನಿಯರ್ ಆಗಿದ್ದ ನವೀನ್ ನನಗೂ ಪರಿಚಯವಿದ್ದರು ಎಂದು ಅಮಿತ್ ತನ್ನ ಅನುಭವವನ್ನು ಹಂಚಿಕೊಂಡರು.
ನಂತರ ಮಗ ಮನೆಗೆ ಬಂದಿದ್ದಾನೆ ಎಂದು ಖುಷಿಯಾಗುತ್ತಿದೆ. ಭಾರತ ಸರ್ಕಾರ ಹಾಗೂ ಎಂಬೆಸಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಮತ್ತು ನವೀನ್ ಪೋಷಕರಿಗೆ ಆ ದೇವರು ಕಷ್ಟ ಭರಿಸುವ ಶಕ್ತಿ ನೀಡಲಿ ಎಂದು ಅಮಿತ್ ಪೋಷಕರು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ