ಬೀದರ್: ಡ್ಯೂಟಿಗೆ ಲೇಟಾಗಿ ಬಂದಿದ್ದನ್ನು ಪ್ರಶ್ನೆ ಮಾಡಿದ ಕರ್ತವ್ಯನಿರತ ಲೇಡಿ ಪಿಎಸ್‌ಐ (Lady PSI) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ನನ್ನು (Constable) ಅಮಾನತುಗೊಳಿಸಲಾಗಿದೆ.
ಮಹಿಳಾ ಠಾಣೆ ಪಿಎಸ್‌ಐ ಮಲ್ಲಮ್ಮ ಮೇಲೆ ಹಲ್ಲೆ ಮಾಡಿ ಅಶಿಸ್ತಿನ ವರ್ತನೆ ತೊರಿದ ಹಿನ್ನಲೆಯಲ್ಲಿ ನ್ಯೂಟೌನ್ ಠಾಣೆಯ ಕಾನ್‌ಸ್ಟೆಬಲ್ ಧನರಾಜ್‌ನನ್ನು ಅಮಾನತುಗೊಳಿಸಿ ಎಸ್ಪಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ
Advertisement
Advertisement
ಕೆಇಎ ಪರೀಕ್ಷೆ (KEA Exam) ಭದ್ರತಾ ಸಮಯದಲ್ಲಿ ಬಂದೋಬಸ್ತ್‌ಗೆ ಕಾನ್‌ಸ್ಟೇಬಲ್ ಧನರಾಜ್ ತಡಮಾಡಿ ಕೇಂದ್ರಕ್ಕೆ ಬಂದಿದ್ದನ್ನ ಪ್ರಶ್ನೆ ಮಾಡಿದ ಪಿಎಸ್‌ಐ ಮಲ್ಲಮ್ಮ ಮೇಲೆ ಕಾನಸ್ಟೇಬಲ್ ಗಂಬೀರವಾಗಿ ಹಲ್ಲೆ ಮಾಡಿದ್ದಾನೆ. ತಡ ಮಾಡಿ ಬಂದಿದ್ದಲ್ಲದೇ ಪ್ರಶ್ನೆ ಮಾಡಿದ ಪಿಎಸ್‌ಐ ಮಹಿಳೆ ಎಂಬುದನ್ನೂ ನೋಡದೆ ಕುತ್ತಿಗೆಯ ಭಾಗ ಹಿಡಿದು ಬೇವಿನ ಮರಕ್ಕೆ ಗುದ್ದಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ – ಸೋಮವಾರದಿಂದ 4 ದಿನಗಳ ಭೇಟಿ
Advertisement