ಬೀದರ್: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಆಮ್ಲಜನಕದ (Oxygen) ಕೊರತೆಯಿಂದ ಬೀದರ್ (Bidar) ಮೂಲದ ಯೋಧರೊಬ್ಬರು (Soldier) ಹುತಾತ್ಮರಾಗಿರುವ ಘಟನೆ ನಡೆದಿದೆ. ರಾಮದಾಸ್ ಚಂದಾಪೂರೆ(35) ಹುತಾತ್ಮರಾದ ಯೋಧ.
ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಬೇಡಕುಂದಾ ಗ್ರಾಮದ ಯೋಧ ಕಳೆದ ಹಲವು ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 15 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆಮ್ಲಜನಕದ ಕೊರತೆಯಿಂದ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು
ಯೋಧನ ಪಾರ್ಥೀವ ಶರೀರ ಸೋಮವಾರ ಜಮ್ಮು ಮತ್ತು ಕಾಶ್ಮೀರದಿಂದ ಸ್ವಗ್ರಾಮಕ್ಕೆ ಬರಲಿದೆ. ನಾಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೈದರಾಬಾದ್ ಮೂಲಕ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಲಿದೆ. ಇದನ್ನೂ ಓದಿ: ಹೊಸ ತಲೆಮಾರಿಗೆ ಅವಕಾಶ ಸಿಗಬೇಕು: ಸಿಎಂ ಸ್ಥಾನಕ್ಕೆ ರಾಜೀನಾಮೆ ಸುಳಿವು ನೀಡಿದ ಗೆಹ್ಲೋಟ್?