ರಾಮನಗರ: ಮನೆಮುಂದೆ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ (Gas Cylinder) ಸರಬರಾಜು ವಾಹನದಲ್ಲಿ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಬಿಡದಿ ಪೊಲಿಸರು (Bidadi Police) ಯಶಸ್ವಿಯಾಗಿದ್ದಾರೆ.
ಮಹೇಶ್ ನಾಯಕ್ (19), ಗೋವಿಂದರಾಜು (20) ಬಂಧಿತ ಆರೋಪಿಗಳು. ರಾಮನಗರ (Ramanagara) ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆಮುಂದೆ ನಿಂತಿದ್ದ ಗ್ಯಾಸ್ ಸರಬರಾಜು ವಾಹನದಲ್ಲಿ 8 ಸಿಲಿಂಡರ್ ಕದ್ದು ಖದೀಮರು ಎಸ್ಕೇಪ್ ಆಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಗಾಂಜಾ ಹೊಡೆದು ಗೋಕರ್ಣ ಬೀಚ್‌ಲ್ಲಿ ತೂರಾಡುತ್ತಿದ್ದ ಇಬ್ಬರು ಟೆಕ್ಕಿಗಳು ಅರೆಸ್ಟ್

ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ಬಂಧಿತ ಆರೋಪಿಗಳಿಂದ 8 ಗ್ಯಾಸ್ ಸಿಲಿಂಡರ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಯುದ್ಧ – ಇತ್ತ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ ಕಿಮ್ ಜಾಂಗ್ ಉನ್

