ಮೆಲ್ಬರ್ನ್: ಇಲ್ಲಿನ ಎಂಸಿಜೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ ಡೆಡ್ ಬಾಲ್ ಎಸೆದು ಎದುರಾಳಿ ಬ್ಯಾಟ್ಸ್ ಮನ್ ಫಿಂಚ್‍ಗೆ ಶಾಕ್ ನೀಡಿದ ಘಟನೆ ನಡೆದಿದೆ.
ಪಂದ್ಯದ 9ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್, ಓವರಿನ ಅಂತಿಮ ಎಸೆತವನ್ನು ಅಂಪೈರ್ ಹಿಂದಿನಿಂದಲೇ ಎಸೆದಿದ್ದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಫಿಂಚ್ ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದರು. ಆದರೆ ಈ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಪರಿಗಣಿಸಿದರು. ಪರಿಣಾಮ ಭುವಿ ಮತ್ತೊಂದು ಎಸೆತ ಬೌಲ್ ಮಾಡಿದರು. ಅಚ್ಚರಿ ಎಂಬಂತೆ ಈ ಎಸೆತದಲ್ಲಿ ಫಿಂಚ್ ಎಲ್‍ಬಿಡಬ್ಲೂ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿದರು.
Advertisement
This one was called lbw… #AUSvIND pic.twitter.com/Kno6FrQvm6
— cricket.com.au (@cricketcomau) January 18, 2019
Advertisement
ಸರಣಿಯಲ್ಲಿ ಭುವನೇಶ್ವರ್ ಕುಮಾರ್ 3ನೇ ಭಾರಿಗೆ ಫಿಂಚ್ ವಿಕೆಟ್ ಪಡೆದ ಸಾಧನೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭುವನೇಶ್ವರ್ ಕುಮಾರ್ ಡೆಡ್ ಬೌಲಿಂಗ್ ಮಾಡುತ್ತಿರುವ ಜಿಫ್ ವಿಡಿಯೋ ಚರ್ಚೆಯಾಗುತ್ತಿದೆ. ಪಂದ್ಯದಲ್ಲಿ ಭುವಿ 8 ಓವರ್ ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
Advertisement
This one was called a dead ball… #AUSvIND pic.twitter.com/8V7ElRzZd9
— cricket.com.au (@cricketcomau) January 18, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv