ಬೆಂಗಳೂರು: ಬಿಜೆಪಿ ಹೈಕಮಾಂಡ್‍ಗೆ ಈಗ ಕರ್ನಾಟಕವೇ ಫೇವರೇಟ್. ಕರ್ನಾಟಕದಲ್ಲಿ ಅಧಿಕಾರ ಗಟ್ಟಿಗೊಳಿಸಿಕೊಳ್ಳಲು ಮೆಗಾ ಪ್ಲ್ಯಾನ್ ಮಾಡಿದೆ. ಬಿಜೆಪಿ ಹೈಕಮಾಂಡ್ ಆ ದೊಡ್ಡ ಸಂಘಟನಾ ನಿರ್ಧಾರಕ್ಕೆ ಕೈ ಹಾಕುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಹೈಕಮಾಂಡ್ ಬಿಜೆಪಿ ಬಲವರ್ಧನೆಗಾಗಿ ಬದಲಾವಣೆಗೆ ಮುಂದಾಗಿದೆ. ಅದುವೇ ರಾಜ್ಯ ಬಿಜೆಪಿ ಉಸ್ತುವಾರಿ ಸ್ಥಾನ.
ಅಂದಹಾಗೆ ಕರ್ನಾಟಕದಲ್ಲಿ ಬಿಜೆಪಿ ಎಚ್ಚರ ತಪ್ಪಿ ನಡೆಯಬಾರದು. ಬಿಜೆಪಿ ಇರುವ ಅಧಿಕಾರವನ್ನ ಗಟ್ಟಿಗೊಳಿಸಿಕೊಳ್ಳಬೇಕಂತೆ. ಇದು ಬಿಜೆಪಿ ಹೈಕಮಾಂಡ್‍ನ ತಂತ್ರಗಾರಿಕೆಯ ಒಂದು ಭಾಗ. ಆ ಕಾರಣಕ್ಕಾಗಿಯೇ ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಬದಲಿಸಲು ಪ್ಲ್ಯಾನ್ ನಡೆದಿದೆ. ಮುರಳೀಧರ್‍ರಾವ್ ಜಾಗಕ್ಕೆ ದೊಡ್ಡ ತಲೆಯನ್ನೇ ತಂದು ಕೂರಿಸಲು ತಂತ್ರ ಕೂಡ ಸಿದ್ಧವಾಗಿದೆ ಅನ್ನೋದು ಬಿಜೆಪಿ ಪಡಸಾಲೆಯ ಬಹುಚರ್ಚಿತ ವಿಷಯ. ಬಹು ಕಾಲದವರೆಗೂ ಉಸ್ತುವಾರಿಗಿಯೇ ಮುಂದುವರಿದಿರುವ ಮುರಳೀಧರ್ ರಾವ್ ಬದಲಾವಣೆಗೆ ರಾಜ್ಯದ ಹಲವು ನಾಯಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಸಂಘಟನಾ ಚತುರ, ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ಮೇಲೆ ಹೈಕಮಾಂಡ್ ಕಣ್ಣು ಇಟ್ಟಿದೆ ಎನ್ನಲಾಗಿದೆ. ಉತ್ತರ ಪ್ರದೇಶ ಗೆದ್ದ ಉಸ್ತುವಾರಿ ಚತುರ. ಇತ್ತಿಚೇಗೆ ಮಹಾರಾಷ್ಟ್ರ ಚುನಾವಣೆಯ ನಿರ್ವಹಣೆ ಮಾಡಿದ ಸಂಘಟನಾ ಚಾಣಕ್ಯ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಭೂಪೇಂದ್ರ ಯಾದದ್, ಅಮಿತ್ ಶಾ, ಮೋದಿ ಫೇವರೇಟ್ ಲೀಡರ್. ಆ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಬಿಜೆಪಿಯನ್ನ ಇನ್ನಷ್ಟು ಗಟ್ಟಿಗೊಳಿಸುವ ತಂತ್ರಗಾರಿಕೆ ಮಾಡಿದ್ದು, ಹಾಗಾಗಿಯೇ ರಾಜ್ಯ ಉಸ್ತುವಾರಿ ಬದಲಾವಣೆಗೆ ದೊಡ್ಡಮಟ್ಟದ ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.