– ಆಸ್ಪತ್ರೆಯ ಮುಂಭಾಗದಲ್ಲಿ ಹೈಡ್ರಾಮಾ
– Pesudo Pregnancy case ಎಂದ ವೈದ್ಯರು
ಭೋಪಾಲ್: ಆಪರೇಷನ್ ಬಳಿಕ ಗರ್ಭಿಣಿ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು ಹೇಳಿದ ಬಳಿಕ ಆಸ್ಪತ್ರೆಯ ಮುಂದೆ ಹೈಡ್ರಾಮ ನಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಒಂಭತ್ತು ತಿಂಗಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಆಪರೇಷನ್ ಬಳಿಕ ನಿಮ್ಮ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದ ಹೋಶಂಗಾಬಾದ್ ರಸ್ತೆಯ ನೊಬಲ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
Advertisement
Advertisement
ಹೆರಿಗೆ ನೋವೆಂದು ಆಸ್ಪತ್ರೆಗೆ ಕೃಷ್ಣಾ ಸೋಲಂಕಿ ದಾಖಲಾಗಿದ್ದರು. ತುರ್ತು ಪ್ರಕರಣವೆಂದು ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಒಂದು ಗಂಟೆಯ ಬಳಿಕ ಆಸ್ಪತ್ರೆಗೆ ಆಗಮಿಸಿದ ಮಹಿಳೆಯ ಪತಿ ಪ್ರೇಮ್ ಲಾಲ್‍ರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆಸಿ ನಿಮ್ಮ ಪತ್ನಿಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ. ಆಕೆ ಗರ್ಭಿಣಿಯೇ ಆಗಿಲ್ಲ ಎಂದು ತಿಳಿಸಿದ್ದಾರೆ.
Advertisement
ನಡೆದಿದ್ದು ಏನು?
ಬಂಗರಸಿಯಾ ಸಿಆರ್‍ಪಿಎಫ್ ಕ್ಯಾಂಪ್ ನಿವಾಸಿ ಕೃಷ್ಣಾ ಸೋಲಂಕಿ ಜೂನ್ 2ರಂದು ನೊಬಲ್ ಆಸ್ಪತ್ರೆಗೆ ಸುಮಾರು ರಾತ್ರಿ 11 ಗಂಟೆಗೆ ದಾಖಲಾಗುತ್ತಾರೆ. ಹೆರಿಗೆ ನೋವು ಎಂದು ಹೇಳಿ ದಾಖಲಾದ ಮಹಿಳೆ ತಾನು ಒಂಭತ್ತು ತಿಂಗಳ ತುಂಬು ಗರ್ಭಿಣಿ ಎಂದು ತಿಳಿಸಿದ್ದಾರೆ. ಮಹಿಳೆಯ ಮಾತನ್ನು ನಂಬಿದ ಆಸ್ಪತ್ರೆಯ ಸಿಬ್ಬಂದಿ ಆಕೆಯ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಆಪರೇಷನ್ ವೇಳೆ ಹೊಟ್ಟೆಯಲ್ಲಿ ಮಗು ಇಲ್ಲದಿರುವುದು ಬೆಳಕಿಗೆ ಬಂದಿದೆ.
Advertisement
ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಮಗು ಜೀವಂತವಾಗಿದೆ. ಮಗುವಿನ ಉಸಿರಾಟ ಪ್ರಕ್ರಿಯೆ ಶೇ.80ರಷ್ಟಿದೆ ಎಂದು ತಿಳಿಸಿ ಅತ್ತಿಗೆಯನ್ನು ಆಪರೇಷನ್ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಒಂದು ಗಂಟೆಯ ಬಳಿಕ ಸೋದರನನ್ನು ಕರೆದು ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯೇ ಮಗುವನ್ನು ಬೇರೆಡೆಗೆ ರಹಸ್ಯವಾಗಿ ರವಾನಿಸಿದ್ದಾರೆ ಎಂದು ಮಹಿಳೆಯ ಬಾಮೈದ ದೀಪಕ್ ಸೋಲಂಕಿ ಆರೋಪಿಸಿದ್ದಾರೆ.
ವೈದ್ಯರು ಹೇಳಿದ್ದೇನು?
ಹೆರಿಗೆ ನೋವು ಎಂದು ದಾಖಲಾದ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ಈ ಹಿಂದಿನ ಸೋನೊಗ್ರಾಫಿಯ ರಿಪೋರ್ಟ್ ಕೇಳಿದ್ದಾರೆ. ಈ ವೇಳೆ ಮಹಿಳೆ ತನ್ನ ಬ್ಯಾಗ್ ಮರೆ ಮಾಡುವುದು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಬಚ್ಚಿಟ್ಟ ವರದಿಯಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ದಾಖಲಾಗಿದೆ. ಮಹಿಳೆ ಪ್ರಕಾರ ಆಕೆ ಕಳೆದ ಆರು ತಿಂಗಳಿನಿಂದ ನೊಬಲ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದು, ವೈದ್ಯರು ಮೊದಲೇ ಆಕೆ ಗರ್ಭಿಣಿ ಅಲ್ಲ ಎಂದು ಖಚಿತ ಪಡಿಸಿದ್ದರು.
ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಸೋನೊಗ್ರಾಫಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಕಳೆದ ಆರು ತಿಂಗಳಿನಿಂದ ನಿಮ್ಮ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಮೊದಲಿನ ಹೆರಿಗೆ ಸಹ ಶಸ್ತ್ರಚಿಕಿತ್ಸೆಯಿಂದಾಗಿ ನಡೆದಿದೆ ಎಂದಾಗ ಎಮರ್ಜಿನ್ಸಿ ಸಂದರ್ಭದಲ್ಲಿ ಸೋನೊಗ್ರಾಫಿ ಇಲ್ಲದೆಯೇ ಕೆಲವೊಮ್ಮ ಶಸ್ತ್ರಚಿಕಿತ್ಸೆ ಮಾಡಬೇಕಾಗತ್ತದೆ. ಮಹಿಳೆ ಸುಳ್ಳು ಹೇಳುತ್ತಿದ್ದಾರೆ ನೊಬಲ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಮಹಿಳೆ ಸುಡೋ ಪ್ರಗ್ನೆನ್ಸಿ ಕಾಯಿಲೆಗೆ ಒಳಗಾಗಿದ್ದು, ಆಕೆಯನ್ನು ನೋವಿನಿಂದ ಒದ್ದಾಡುತ್ತಿದ್ದ ಆಸ್ಪತ್ರೆಗೆ ಕರೆತರಲಾಗಿತ್ತು. ಮಹಿಳೆಯ ಬಳಿ ದೊರೆತ ರಿಪೋರ್ಟ್ ನಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ವರದಿಯಾಗಿದೆ ಎಂದು ನೊಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಜ್ಞಾ ಮಿಶ್ರಾ ತಿಳಿಸಿದ್ದಾರೆ.
ಏನಿದು ಸುಡೋ ಪ್ರೆಗ್ನೆನ್ಸಿ?
ಸುಡೋ ಎಂದರೆ ಕಾಲ್ಪನಿಕ. ಸೊಡೋ ಪ್ರೆಗ್ನೆನ್ಸಿಯಿಂದ ಬಳಲುತ್ತಿರುವ ಮಹಿಳೆ ತಾನು ಗರ್ಭಿಣಿ ಎಂದು ಬಲವಾಗಿ ನಂಬಿಕೊಂಡಿರುತ್ತಾರೆ. ನಂಬಿಕೆಯಂತೆ ಮಹಿಳೆಯ ಹೊಟ್ಟೆಯೂ ಸಹ ದೊಡ್ಡದಾಗುತ್ತಾ ಹೋದಾಗ ಆಕೆಯ ನಂಬಿಕೆ ಮತ್ತಷ್ಟು ಬಲವಾಗುತ್ತದೆ. ಈ ಸಂದರ್ಭದಲ್ಲಿ ಸೊನೊಗ್ರಾಫಿ ಮಾಡಿಸಿದಾಗ ನಿಜಾಂಶ ತಿಳಿಯುತ್ತದೆ. ಸಾಮಾನ್ಯವಾಗಿ ಸೊನೊಗ್ರಾಫಿ ವರದಿಗಳಿಲ್ಲದೇ ಯಾರು ಶಸ್ತ್ರಚಿಕಿತ್ಸೆಗೆ ಮುಂದಾಗುವುದಿಲ್ಲ. ಹೆರಿಗೆಯ ತುರ್ತು ಸಂದರ್ಭಗಳಲ್ಲಿ ಎರಡು ಜೀವಗಳ ಉಳಿವಿಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ಜಿಎಂಸಿಯ ಡೀನ್, ಡಾ.ಅರುಣ್ ಕುಮಾರ್ ಹೇಳಿದ್ದಾರೆ.