ಕಾರ್ತಿಕ್ ಆರ್ಯನ್ (Karthik Aryan) ನಟನೆಯ ‘ಭೂಲ್ ಭೂಲಯ್ಯ 3’ (Bhool Bhulaiyaa 3) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ದೆವ್ವದ ರೂಪದಲ್ಲಿ ವಿದ್ಯಾ ಬಾಲನ್ ಬೆಚ್ಚಿ ಬೀಳಿಸಿರುವ ತುಣುಕು ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. ಚಿತ್ರದ ಟೀಸರ್ ಇದೀಗ ಟ್ರೆಂಡಿಂಗ್‌ನಲ್ಲಿದೆ. ಇದನ್ನೂ ಓದಿ:ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ
‘ಭೂಲ್ ಭೂಲಯ್ಯ 2’ ಚಿತ್ರದ ಸಕ್ಸಸ್ ನಂತರ ಇದರ ಪಾರ್ಟ್ 3ನಲ್ಲಿ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ತೃಪ್ತಿ ದಿಮ್ರಿ (Tripti Dimri) ಕಾಣಿಸಿಕೊಂಡಿದ್ದಾರೆ. ಮಂಜುಲಿಕಾ ಆಗಿ ಹೆದರಿಸಲು ವಿದ್ಯಾ ಬಾಲನ್ (Vidya Balan) ಟೊಂಕ ಕಟ್ಟಿ ನಿಂತಿದ್ದಾರೆ. ಟೀಸರ್ ಝಲಕ್ ಭಯಾನಕವಾಗಿ ಮೂಡಿ ಬಂದಿದೆ. ಹಾಟ್ ಬ್ಯೂಟಿ ವಿದ್ಯಾ ಬಾಲನ್ ಈ ಬಾರಿ ದೆವ್ವದ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.
View this post on Instagram
ವಿದ್ಯಾ ಬಾಲನ್ ಮತ್ತು ಕಾರ್ತಿಕ್ ಆರ್ಯನ್ ಜಟಾಪಟಿ ತೋರಿಸಲಾಗಿದೆ. ಬಿಟ್ಟಿರುವ ಟೀಸರ್‌ನಿಂದ ಚಿತ್ರದ ಕುರಿತು ಕುತೂಹಲ ಕೆರಳಿಸಿದೆ. ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಸದ್ಯ ‘ಸ್ತ್ರೀ 2’ (Stree 2) ಸಕ್ಸಸ್‌ನಿಂದ ಬಾಲಿವುಡ್‌ಗೆ (Bollywood) ಮರುಜೀವ ಸಿಕ್ಕಂತೆ ಆಗಿದೆ. ‘ಭೂಲ್ ಭೂಲಯ್ಯ 3’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.