ಭೀಮ (Bheem) ಸೆಟ್ಟೇರಿದಾನಿಂದಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ನಿರ್ದೇಶನದಲ್ಲಿ ಮೂಡಿ ಬರ್ತಿರೋ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ. ಪ್ರಚಂಡ ಪ್ರತಿಭಾವಂತರ ದಂಡುಕಟ್ಟಿಕೊಂಡು ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ.
Advertisement
ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿರೋ ಚಿತ್ರತಂಡ, ಇದೀಗ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ. ಅದ್ರಂತೆ, ಮೊದಲ ಹಾಡನ್ನ ಇದೇ 18ನೇ ತಾರೀಖು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡ್ತಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ (Charan Raj) ಜೊತೆಗೆ ವಿಜಯ್ ಸಲಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ.
Advertisement
Advertisement
ಈಗಾಗ್ಲೇ ರಿಲೀಸ್ ಆಗಿರೋ ಟೀಸರ್ ಬಿಟ್ ನಲ್ಲೇ ವಿಜಯ್ ಚರಣ್ ಮ್ಯೂಸಿಕ್ ಝಲಕ್ ನ ಬಿಟ್ಟು ಕುತೂಹಲ ಹುಟ್ಟಿಸಿದ್ರು. ಹಾಗಾಗಿ ಈಗ ಗೌರಿ ಗಣೇಶನ ಹಬ್ಬಕ್ಕೆ ರಿಲೀಸ್ ಆಗ್ತಿರೋ ಬ್ಯಾಡ್ ಬಾಯ್ಸ್ ಮೇಲೆ ಸಿಕ್ಕಾಪಟ್ಟೆ ಕುತೂಹಲ ನಿರೀಕ್ಷೆ ಇದೆ.
Advertisement
Web Stories