ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ 90 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ತ್ರಿವಿಕ್ರಮ್ ಬಗ್ಗೆ ಮಾತನಾಡುತ್ತಾ ಕಿಚ್ಚನ ಮುಂದೆ ಭವ್ಯಾ ನಾಚಿ ನೀರಾಗಿದ್ದಾರೆ. ಭವ್ಯಾ ಆಡಿದ ಮಾತಿಗೆ ಸುದೀಪ್ (Sudeep) ನಕ್ಕಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ.
Advertisement
ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡುತ್ತೀರಾ ಎಂದು ಸುದೀಪ್ ಹೇಳಿದ್ದರು. ನಾನು ಐಶುಗೆ ಗಿಫ್ಟ್ ಕೊಡುತ್ತೇನೆ. ಆ ಹುಡುಗಿ ಅಮ್ಮ ಇರದೇ ಹೇಗಿರಬಹುದು ಅನಸ್ತು? ಎಂದು ಚೈತ್ರಾ ಅವರು ಐಶ್ವರ್ಯಾ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಇದಾದ ಮೇಲೆ ಭವ್ಯಾಗೆ ನೀವು ಯಾರಿಗೆ ಗಿಫ್ಟ್ ಕೊಡಬೇಕು ಎಂದು ಕೇಳಿದಾಗ, ತ್ರಿವಿಕ್ರಮ್‌ಗೆ ಕೊಡಲು ಇಷ್ಟಪಡುತ್ತೇನೆ ಎಂದು ಭವ್ಯಾ ಹೇಳಿದ್ದಾರೆ. ಈ ವೇಳೆ, ಸುದೀಪ್ ಇದು ಎಂತಹ ಸರ್ಪ್ರೈಸ್ ಅಲ್ವಾ? ಎಂದು ಭವ್ಯಾ ಕಾಲೆಳೆದಿದ್ದಾರೆ. ಇದನ್ನೂ ಓದಿ:ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್ ವಾರ್ನಿಂಗ್
Advertisement
Advertisement
ನಾಚುತ್ತಲೇ ತ್ರಿವಿಕ್ರಮ್ ಕುರಿತು ಮಾತನಾಡಿದ ಭವ್ಯಾ, ಈ ವ್ಯಕ್ತಿ ನೋಡುವುದಕ್ಕೆ ತುಂಬಾ ಒರಟ ಅನಿಸ್ತಾರೆ. ಆದರೆ ಅವರು ವೇರಿ ಸ್ವೀಟ್ ಎಂದು ಹೇಳಿದ್ದಾರೆ. ಆಗ ತಮಾಷೆಯಾಗಿ ಸುದೀಪ್ ಸಾರಿ ಏನ್ ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಭವ್ಯಾ ನಿಂತಲ್ಲೇ ನಾಚಿ ನೀರಾಗಿದ್ದಾರೆ. ತ್ರಿವಿಕ್ರಮ್‌ರನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಸರ್. ಅರ್ಥ ಮಾಡಿಕೊಂಡ ಮೇಲೆ ತ್ರಿವಿಕ್ರಮ್‌ನಿಂದ ದೂರ ಆಗೋದು ಕಷ್ಟ ಎಂದ ಭವ್ಯಾ ಮಾತಿಗೆ ನಕ್ಕಿದ್ದಾರೆ.
Advertisement
View this post on Instagram
ಶೋ ಶುರುವಾದ ದಿನದಿಂದ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಉತ್ತಮ ಒಡನಾಟವಿದೆ. ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ಮನೆ ಮಂದಿ ಊಹಿಸಿದ್ದಾರೆ. ಆದರೆ ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಇಬ್ಬರೂ ಆಗಾಗ ಸ್ಪಷ್ಟನೆ ನೀಡುವ ಕೆಲಸ ಕೂಡ ಮಾಡಿದ್ದು ಇದೆ. ಬಿಗ್ ಬಾಸ್ ಆಟ ಮುಗಿದ್ಮೇಲೆ ಈ ಜೋಡಿ ಹಕ್ಕಿ ರಿಯಲ್ ಆಗಿಯೂ ಜೋಡಿಯಾಗ್ತಾರಾ? ಎಂದು ಕಾದುನೋಡಬೇಕಿದೆ.