‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋನಲ್ಲಿ ವಿನ್ನರ್ ಯಾರೆಂದು ತಿಳಿದುಕೊಳ್ಳಲು ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆಯ ಡೇರಿಂಗ್ ಗರ್ಲ್ ಎಂದೇ ಸೌಂಡ್ ಮಾಡಿದ್ದ ಭವ್ಯಾ (Bhavya Gowda) ಎಲಿಮಿನೇಟ್ ಆಗಿದ್ದಾರೆ. ಭವ್ಯಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
Advertisement
ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಫಿನಾಲೆ ವಾರ ತಲುಪಿದ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಟ ಆಡಿದ್ದರು. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಸಾಕಷ್ಟು ಬಾರಿ ಎಡವಿದರೂ ಮತ್ತೆ ಎದ್ದು ನಿಂತು ಆಟ ಆಡಿದ್ದರು. ಅವರು ಮೂರು ಬಾರಿ ಕ್ಯಾಪ್ಟನ್ ಆದರೂ ಅವರ ಬಗ್ಗೆ ಇರೋ ಆರೋಪಗಳು ಸಾಕಷ್ಟಿತ್ತು.
Advertisement
Advertisement
ಭವ್ಯಾ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ವಾರದ ದಿನಗಳಲ್ಲಿ ಹಾರಾಟ-ಚೀರಾಟ ನಡೆಸುವ ಅವರು ವೀಕೆಂಡ್‌ನಲ್ಲಿ ಸೈಲೆಂಟ್ ಆಗಿರುತ್ತಿದ್ದರು. ಸಾಕಷ್ಟು ವಿಚಾರಗಳಲ್ಲಿ ಅವರು ಡ್ರಾಮಾ ಮಾಡಿದ್ದು ಇದೆ. ಅವರು ತ್ರಿವಿಕ್ರಮ್‌ನ ಸ್ವಾರ್ಥಕ್ಕಾಗಿ ಬಳಸಿಕೊಂಡರು ಎಂಬ ಆರೋಪ ಇದೆ. ಸ್ವತಃ ತ್ರಿವಿಕ್ರಮ್ ಅವರೇ ಈ ಆರೋಪ ಮಾಡಿದ್ದರು. ಅದಷ್ಟೇ ಅಲ್ಲ, ತ್ರಿವಿಕಮ್ ಜೊತೆಗಿನ ಗೆಳೆತನದ ವಿಚಾರವಾಗಿಯೂ ಹೈಲೆಟ್ ಆಗಿದ್ದರು ಭವ್ಯಾ. ಇಬ್ಬರೂ ಪ್ರೇಮಿಗಳು ಎಂದೇ ಹೈಲೆಟ್ ಆಗಿದ್ದಾರೆ.
Advertisement
ಇದೀಗ ಬಿಗ್ ಬಾಸ್ ಆಟದ ರೇಸ್‌ನಲ್ಲಿ ಭವ್ಯಾ ಕೂಡ ಇದ್ದು ಕಪ್ ಗೆಲ್ಲುವ ಭರವಸೆಯಲ್ಲಿದ್ದರು. ಆದರೆ ಆಸೆಗೆ ಬ್ರೇಕ್ ಬಿದ್ದಿದೆ.