ಮುಂಬೈ: ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಹಾಗೂ ಹರ್ಷ ಲಿಂಬಾಚಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿಶೇಷವೆಂದರೆ ಈ ಸಂತಸ ವಿಚಾರವನ್ನು ಭಾರತಿ ಸಿಂಗ್ ಪತಿಗೆ ತಿಳಿಸುತ್ತಿರುವ ವೀಡಿಯೋವೊಂದನ್ನು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಮೊದಲು ಭಾರತಿ ಬಾತ್ ರೂಮ್‍ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸುತ್ತಾರೆ. ನಂತರ ಪ್ರೆಗ್ನೆನ್ಸಿ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದ್ದನ್ನು ಕ್ಯಾಮೆರಾಗೆ ತೋರಿಸಿ ತಾವು ಗರ್ಭಿಣಿಯಾಗುತ್ತಿರುವ ವಿಚಾರ ತಿಳಿದು ಸಂತಸ ಪಡುತ್ತಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್
ನಂತರ ನಾನು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಹೇಗೆ ಹೇಳುವುದು ಎಂದು ತಡವರಿಸುತ್ತಾ ಮಲಗಿರುವ ಹರ್ಷ ಅವರ ಬಳಿ ಹೋಗಿ ತಾವು ಗರ್ಭಿಣಿಯಾಗುತ್ತಿರುವ ವಿಚಾರವನ್ನು ತಿಳಿಸುತ್ತಾರೆ. ಆಗ ಹರ್ಷ ಅವರು ಭಾರತಿ ಅವರನ್ನು ಬಿಗಿದಪ್ಪಿಕೊಂಡು, ಇದನ್ನೆಲ್ಲಾ ರೆಕಾರ್ಡ್ ಮಾಡುತ್ತಿರುವುದು ಒಳ್ಳೆಯದೇ ಆಯಿತು. ನಾವು ತಾಯಿಯಾಗುತ್ತಿದ್ದೇವೆ ಎಂದು ಹೇಳುತ್ತಾ, ಕ್ಷಮಿಸಿ ಭಾರತಿ ಅಮ್ಮ ಆಗುತ್ತಿದ್ದಾಳೆ. ನಾನು ಅಪ್ಪ ಆಗುತ್ತಿದ್ದೇನೆ. ನಮಗೆ ಮಗು ಆಗುತ್ತಿರುವುದರಿಂದ ನಿಮಗೆಲ್ಲರಿಗೂ ತೊಂದರೆಯಾಗುತ್ತದೆ. ಏಕೆಂದರೆ ನಾನು ತೊಂದರೆ ಪಡುತ್ತೇವೆ ಎಂದು ಹಾಸ್ಯಮಯವಾಗಿ ನುಡಿಯುತ್ತಾ, ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ
2013ರಲ್ಲಿ ತೆರೆಕಂಡ ನಟ ಪ್ರದೀಪ್ ಅಭಿನಯದ ರಂಗನ್ ಸ್ಟೈಲ್ ಸಿನಿಮಾದ ಗಂಗಮ್ ಸ್ಟೈಲ್ ಹಾಡೋಂದರಲ್ಲಿ ಭಾರತಿ ಹೆಜ್ಜೆ ಹಾಕಿದ್ದರು. ಇದನ್ನೂ ಓದಿ: ಅಪ್ಪು ಕನಸು ನನಸು – ರಾಜ್ ಮನೆ ಇದೀಗ ಮ್ಯೂಸಿಯಂ