ಜೈಪುರ್: 10 ದಿನಗಳಲ್ಲಿ ದೇವಸ್ಥಾನ ಖಾಲಿ ಮಾಡದಿದ್ದರೆ ತಲೆ ಕಡಿಯಲಾಗುವುದು ಎಂದು ರಾಜಾಸ್ಥಾನದ ಭರತಪುರ್ ಜಿಲ್ಲೆಯ ಎಂಎಸ್‌ಜೆ ಕಾಲೇಜಿನಲ್ಲಿರುವ ದೇವಸ್ಥಾನದ ಅರ್ಚಕರಿಗೆ ಬೆದರಿಕೆ ಪತ್ರವೊಂದು ರವಾನೆಯಾಗಿದೆ.
ಅರ್ಚಕರಿಗೆ ಸಾರ್ವಜನಿಕವಾಗಿ ಬೆದರಿಕೆ ನೀಡಿದ್ದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಉದಯಪುರ್‌ದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಬಳಿಕ ಮತ್ತೊಂದು ಬೆದರಿಕೆ ಪತ್ರ ರವಾನೆಯಾಗಿದೆ ಇಂತಹ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಅರ್ಚಕರಿಗೆ ಬಿಗಿ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಗಿದೆ.
Advertisement
ಹಿಂದಿನ ಅರ್ಚಕರ ಮೇಲೆಯೇ ಅನುಮಾನ: ಈ ದೇವಸ್ಥಾನಲ್ಲಿ ಮೊದಲಿದ್ದ ಅರ್ಚಕರು ಹಾಗೂ ಈಗಿನ ಅರ್ಚಕರ ನಡುವೆ ಮನಸ್ತಾಪಗಳಿದ್ದು, ಮೊದಲಿನ ಅರ್ಚಕರೇ ಬೆದರಿಕೆ ಪತ್ರ ರವಾನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Advertisement
ಕನ್ಹಯ್ಯ ಲಾಲ್ ಹತ್ಯೆ: ಕೆಲ ದಿನಗಳ ಹಿಂದೆ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಕಾರಣಕ್ಕಾಗಿಯೇ ಉದಯ್‌ಪುರದಲ್ಲಿ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಲಾಗಿತ್ತು. ಇದಕ್ಕೂ ಮುನ್ನ ಆತನಿಗೆ ಅನೇಕ ಬೆದರಿಕೆ ಕರೆಗಳೂ ಬಂದಿದೆ ಎಂಬುದು ತನಿಖೆ ವೇಳೆ ಬಯಲಾಗಿತ್ತು.
Advertisement
Advertisement
ಕನ್ಹಯ್ಯಲಾಲ್‌ಗೆ ರಕ್ಷಣೆ ನೀಡದ ಪೊಲೀಸರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರು. ಹತ್ಯೆ ಬಳಿಕ ವೀಡಿಯೋ ಮಾಡಿ ಹರಿಬಿಟ್ಟ ಮುಸ್ಲಿಂ ಯುವಕರು, ಪ್ರಧಾನಿ ಮೋದಿ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದ್ದರು. ಈ ಹತ್ಯೆ ಉದಯಪುರದಲ್ಲಿ ಉದ್ವಿಗ್ನ ವತಾವರಣ ಸೃಷ್ಟಿಸಿತ್ತು. ಅಲ್ಲದೆ ಇಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.