ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಇಂದು ಮೂರನೇ ದಿನ. ಇಂದು ಆಧ್ವೈತ್ ಪೆಟ್ರೋಲ್ ಬಂಕ್‍ನಿಂದ ಪಾದಯಾತ್ರೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೈ ನಾಯಕರ ಪಾದಯಾತ್ರೆಗೆ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಬಿಜೆಪಿ, ಸುಳ್ಳಿನಜಾತ್ರೆಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು ಎಮದು ಪ್ರಶ್ನಿಸಿದೆ. ಅಲ್ಲದೆ ಮೇಕೆದಾಟು- ಎಣ್ಣೆ ಘಾಟು ಎಂದು ಕಮಲ ಪಾಳಯ ವ್ಯಂಗ್ಯವಾಡಿದೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್
Advertisement
ಮಾನ್ಯ @DKShivakumar ಅವರೇ, 6 ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಹಿಸಿಕೊಂಡಿದ್ದಕ್ಕೆ, ದೇಶ ಇನ್ನೂ ತೊಂದರೆ ಅನುಭವಿಸುತ್ತಿದೆ.
ನಿಮ್ಮ ರಾಜಕೀಯ ಲಾಭಕ್ಕೆ ಬೆಂಗಳೂರಿನ ಜನತೆಯನ್ನು ಕಷ್ಟಕ್ಕೆ ದೂಡಿ, ಮೂರು ದಿನ ತಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದೀರಿ.
ಜನತೆ ನಿಮ್ಮನ್ನು ಕ್ಷಮಿಸುವರೇ?#ಜನವಿರೋಧಿಕಾಂಗ್ರೆಸ್ pic.twitter.com/u3GqTs7QwL
— BJP Karnataka (@BJP4Karnataka) March 2, 2022
Advertisement
ಟ್ವೀಟ್‍ನಲ್ಲೇನಿದೆ..?
ಮಾನ್ಯ ಡಿಕೆ ಶಿವಕುಮಾರ್ ಅವರೇ 6 ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಹಿಸಿಕೊಂಡಿದ್ದಕ್ಕೆ, ದೇಶ ಇನ್ನೂ ತೊಂದರೆ ಅನುಭವಿಸುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕೆ ಬೆಂಗಳೂರಿನ ಜನತೆಯನ್ನು ಕಷ್ಟಕ್ಕೆ ದೂಡಿ, ಮೂರು ದಿನ ತಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದೀರಿ. ಜನತೆ ನಿಮ್ಮನ್ನು ಕ್ಷಮಿಸುವರೇ? ಇದನ್ನೂ ಓದಿ: ನವೀನ್ ಭಾವಚಿತ್ರಕ್ಕೆ ಹೂವು ಹಾಕಿ, ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸ್ತಿರೋ ಜನ
Advertisement
ಮೇಕೆದಾಟು ಯಾತ್ರೆ #ಸುಳ್ಳಿನಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ.
ಡಿಕೆಶಿ & ಸಿದ್ದರಾಮಯ್ಯ ಬಣಗಳು ಜಾಗ ಇದ್ದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್, ಕಟೌಟು, ಮೂಲಕ ತಮ್ಮ ತಮ್ಮ ನಾಯಕರ ಗುಣಗಾನ ಮಾಡುತ್ತಿವೆ.
ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) March 2, 2022
Advertisement
ಮೇಕೆದಾಟು ಯಾತ್ರೆ ಸುಳ್ಳಿನ ಜಾತ್ರೆಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ. ಡಿಕೆಶಿ & ಸಿದ್ದರಾಮಯ್ಯ ಬಣಗಳು ಜಾಗ ಇದ್ದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್, ಕಟೌಟು, ಮೂಲಕ ತಮ್ಮ ತಮ್ಮ ನಾಯಕರ ಗುಣಗಾನ ಮಾಡುತ್ತಿವೆ. ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!. ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರ ಕೊಡ್ತೀವಿ: ಬೊಮ್ಮಾಯಿ
ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ!#ಸುಳ್ಳಿನಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು?
ವಿಶೇಷವಾಗಿ, ಮೇಕೆದಾಟು – ಎಣ್ಣೆ ಘಾಟು!!!#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) March 2, 2022
ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ! ಸುಳ್ಳಿನಜಾತ್ರೆಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು – ಎಣ್ಣೆ ಘಾಟು!!!
ಮೂರು ದಿನಗಳ ಕಾಲ ಬೆಂಗಳೂರು ನಗರವಾಸಿಗಳು ಟ್ರಾಫಿಕ್ ಜಾಮ್ ಸಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು #ಕಾಂಗ್ರೆಸ್‌ಟ್ರಾಫಿಕ್‌ಬಾಂಬ್ ಎಸೆದಿದ್ದಾರೆ.
1 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡರೆ ಗಂಟೆಗಟ್ಟಲೆ ಬವಣೆಪಡಬೇಕಾದ ಈ ಸಮಯದಲ್ಲಿ 3 ದಿನ ತಡೆದುಕೊಳ್ಳುವುದು ಸುಲಭದ ಮಾತೇ?
ಟ್ರಾಫಿಕ್ ಅನಾಹುತದ ಅರಿವಿದೆಯೇ?#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) March 2, 2022
ಮೂರು ದಿನಗಳ ಕಾಲ ಬೆಂಗಳೂರು ನಗರವಾಸಿಗಳು ಟ್ರಾಫಿಕ್ ಜಾಮ್ ಸಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಟ್ರಾಫಿಕ್ ಬಾಂಬ್ ಎಸೆದಿದ್ದಾರೆ. 1 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡರೆ ಗಂಟೆಗಟ್ಟಲೆ ಬವಣೆ ಪಡಬೇಕಾದ ಈ ಸಮಯದಲ್ಲಿ 3 ದಿನ ತಡೆದುಕೊಳ್ಳುವುದು ಸುಲಭದ ಮಾತೇ?, ಟ್ರಾಫಿಕ್ ಅನಾಹುತದ ಅರಿವಿದೆಯೇ? ಎಂದು ಬರೆದು ಜನ ವಿರೋಧಿ ಕಾಂಗ್ರೆಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಬಿಜೆಪಿ ತೀವ್ರ ಟೀಕೆ ಮಾಡಿದೆ.