-ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ
ಚಿಕ್ಕಬಳ್ಳಾಪುರ: ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯಾ ಅಂತ ಬಸವಣ್ಣನವರ ವಚನ ಸ್ಮರಿಸಿದ ಭಾರತಿ ವಿಷ್ಣುವರ್ಧನ್ ಅವರು ವಿಷ್ಣುವರ್ದನ್ ಸ್ಮಾರಕ ನಿರ್ಮಾಣ ವಿಚಾರದಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಅಗಲಗುರ್ಕಿಯ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಮಾತೃ ಭೋಜನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಜೊತೆ ಮುಖ್ಯ ಅತಿಥಿಗಳಾಗಿ ಭಾರತಿ ವಿಷ್ಣುವರ್ಧನ್ ಆಗಮಿಸಿದ್ದರು.
Advertisement
Advertisement
ಇದಕ್ಕೂ ಮುನ್ನ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ದ್ ಸೇರಿ ಮಕ್ಕಳಿಗೆ ತಮ್ಮ ಕೈ ತುತ್ತು ತಿನ್ನಿಸಿದರು. ಕೆಲಹೊತ್ತು ಮಕ್ಕಳ ಜೊತೆಗೆ ಕಾಲ ಕಳೆದರು. ಬಳಿಕ ಡಾ.ನಿರ್ಮಲಾನಂದನಾಥ ಶ್ರೀಗಳ ಜೊತೆಗೆ ಪಂಕ್ತಿ ಭೋಜನ ಸವಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಚನವನ್ನು ಹೇಳುವ ಮೂಲಕ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಸಾಕಾರವಾಗದಿದ್ದಕ್ಕೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದಂತೆ ಭಾಸವಾಯಿತು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv