– ಅಂಗಡಿ ಮಾಲೀಕನ ಬೈಗುಳದಿಂದ ಕಾಲ್ಕಿತ್ತ ಪ್ರತಿಭಟನಾಕಾರರು
ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಬಂದ್‍ಗೆ ಕರೆ ಕೊಟ್ಟಿದ್ದು, ಹೀಗಾಗಿ ಮೊದಲ ದಿನವಾದ ಇಂದು ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ತಾಲೂಕು ಗುಜ್ಜಾಡಿಯಲ್ಲಿ ನಡೆದಿದೆ. ಅಂಗಡಿ ಮಾಲೀಕನ ಬೈಗುಳ ಕೇಳಿದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement
ಅಂಗಡಿ ಮಾಲೀಕ ಏನ್ ಹೇಳಿದ್ರು..?
ನಾನು ಮೋದಿ ಬೆಂಬಲಿಗ ಮಾತ್ರವಲ್ಲದೇ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಕಮ್ಯೂನಿಷ್ಟರಿಗೆ ನಾವು ಸಪೋರ್ಟ್ ಮಾಡಲ್ಲ. ನೀವು ಒಳ್ಳೆಯ ಹೋರಾಟಗಳನ್ನು ಮಾಡುತ್ತೀರಾ. ಮಾಡುವುದಿದ್ದರೆ ಶಬರಿಮಲೆಗಾಗಿ ಹೋರಾಟ ಮಾಡಿ. ಸಾವಿರ ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡೆಯುತ್ತಿತ್ತು. ಮುಖ್ಯಮಂತ್ರಿಗಳು ಮಾಂಸ ತಿಂದು ದೇವಸ್ಥಾನಕ್ಕೆ ಹೋದಾಗ ಕಮ್ಯುನಿಸ್ಟರು ಬಂದ್ ಮಾಡಲ್ಲ. ಆದ್ರೆ ಒಳ್ಳೆಯ ಪ್ರಧಾನಿ ನಮ್ಮ ದೇಶದಲ್ಲಿದ್ದರೆ ನೀವು ಪ್ರತಿಭಟನೆಗಳನ್ನು ಮಾಡುತ್ತಿದ್ದೀರಾ ಅಂತ ಅಂಗಡಿ ಮಾಲೀಕ ಕೆಂಡಾಮಂಡಲರಾಗಿದ್ದಾರೆ.
Advertisement
Advertisement
ಈ ವೇಳೆ ಪ್ರತಿಭಟನಾಕಾರರು ನಾವು ಮಾನವೀಯತೆಯ ದೃಷ್ಟಿಯಿಂದ ಅಂಗಡಿ ಬಂದ್ ಮಾಡಲು ಹೇಳುತ್ತಿದ್ದೇವೆ ಅಂತ ಹೇಳಿದ್ರು. ಇದರಿಂದ ಮತ್ತಷ್ಟು ಕೋಪಗೊಂಡ ಅಂಗಡಿ ಮಾಲೀಕ, ಯಾವುದು ಮಾನವೀಯತೆ..? ದೇಶದ ಬಗ್ಗೆ ಚಿಂತೆ ಮಾಡಿ. ಅದು ಮಾನವೀಯತೆ. ನರೇಂದ್ರ ಮೋದಿ ಸರ್ಕಾರ ಇಷ್ಟು ಸವಲತ್ತು ನಿಮಗೆ ಕೊಟ್ಟಿದೆ. ಬೆಲೆಯೇರಿಕೆ 2014ರಲ್ಲಿ ಎಷ್ಟು, 2019ರಲ್ಲಿ ಎಷ್ಟು ಎನ್ನುವುದನ್ನು ತಾಕತ್ತಿದ್ದರೆ ಬಂದು ಟ್ಯಾಲಿ ಮಾಡಿ ತಂದು ತೋರಿಸಿ ಅಂತ ಸವಾಲೆಸೆದರು.
ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೇ ನಮ್ಮ ಪುಣ್ಯ. ಕೇರಳಕ್ಕೆ ಹೋಗಿ ಪ್ರತಿಭಟನೆ ಮಾಡಿ. ಶಬರಿಮಲೆಗೆ ಮಾಂಸ ತಿಂದು ಹೋಗಿದ್ದಾರಲ್ವ ಅವರ ವಿರುದ್ಧ ಪ್ರತಿಭಟನೆ ಮಾಡಲು ಇವರಿಗೆ ಜೀವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕನ ಬೈಗುಳದಿಂದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ.
https://www.youtube.com/watch?v=SS8oTtm00f4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv