ಶ್ರೀನಗರ: ಕಾಂಗ್ರೆಸ್ನ (Congress) ಭಾರತ್ ಜೋಡೋ ಯಾತ್ರೆ (Bharat Jodo Yatra) ಗುರುವಾರ ಪಂಜಾಬ್ನಿಂದ ಜಮ್ಮುವಿಗೆ ಪ್ರವೇಶ ಪಡೆದಿದೆ. ದಕ್ಷಿಣದ ರಾಜ್ಯಗಳಿಂದ ಹಿಡಿದು ಉತ್ತರದ ರಾಜ್ಯಗಳವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚಳಿಯಲ್ಲಿಯೂ ಕೇವಲ ಟೀಶರ್ಟ್ನಲ್ಲಿ (T-Shirt) ಕಾಣಿಸಿಕೊಂಡಿದ್ದರು. ಕಾಶ್ಮೀರ (Kashmir) ಪ್ರವೇಶಿಸುತ್ತಿದ್ದಂತೆ ರಾಗಾ ಮೊದಲ ಬಾರಿ ಯಾತ್ರೆಯಲ್ಲಿ ಜಾಕೆಟ್ (Jacket) ಧರಿಸಿದ್ದಾರೆ.
Advertisement
ಜಮ್ಮುವಿನ ಹಲವು ಭಾಗಗಳಲ್ಲಿ ತುಂತುರು ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಕ್ಷಣೆ ಪಡೆದುಕೊಳ್ಳಲು ಜಾಕೆಟ್ ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಬಳಿಕ ಜಾಕೆಟ್ ಅನ್ನು ತೆಗೆದು ಮತ್ತೆ ತಮ್ಮ ಬಿಳಿಯ ಟೀಶರ್ಟ್ನಲ್ಲಿ ನಡೆಯುತ್ತಿದ್ದುದು ಕಂಡುಬಂದಿದೆ. ಇದನ್ನೂ ಓದಿ: ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್
Advertisement
ರಾಹುಲ್ ಇದುವರೆಗೆ ತಮ್ಮ 125 ದಿನಗಳ ಯಾತ್ರೆಯಲ್ಲಿ ಸುಮಾರು 3,400 ಕಿ.ಮೀ ಕ್ರಮಿಸಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಯಾವುದೇ ಆಡಂಬರವಿಲ್ಲದ ಬಿಳಿಯ ಟೀಶರ್ಟ್ನಲ್ಲಿ ಕಂಗೊಳಿಸುತ್ತಿದ್ದರು. ಅವರು ಮೈಕೊರೆಯುವ ಚಳಿಯಲ್ಲಿಯೂ ಕನಿಷ್ಠ ಉಡುಪು ಧರಿಸಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸಿದ್ದರು. ತಮಗೆ ಒಂದುವೇಳೆ ಚಳಿ ಎನಿಸಿದರೆ ಹೆಚ್ಚಿನ ಬಟ್ಟೆ ತೊಡುವುದಾಗಿ ರಾಗಾ ಈ ಹಿಂದೆ ಹೇಳಿದ್ದರು.
Advertisement
Advertisement
ರಾಹುಲ್ ಗಾಂಧಿ ಜನವರಿ 25ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಜನವರಿ 27ರಂದು ಅನಂತ್ನಾಗ್ ಮಾರ್ಗದ ಮೂಲಕ ಶ್ರೀನಗರ ಪ್ರವೇಶಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k