ಉಡುಪಿ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಉಡುಪಿಯ ಅಂಚೆ ಸಿಬ್ಬಂದಿ ವಿಭಿನ್ನವಾಗಿ ತಮ್ಮ ಆಕ್ರೋಶ ಹೊರಹಾಕಿದರು. ಬ್ಯಾಂಡ್ ಬಾರಿಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಉಡುಪಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಡೋಲು ಬಾರಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಯಿತು. ಅಂಚೆ ಕಾರ್ಮಿಕರು ಬ್ಯಾಂಡ್ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಕಚೇರಿ ಸಿಬ್ಬಂದಿ ಬ್ಯಾಂಡ್ ಬಾರಿಸುತ್ತಾ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಸಿಬ್ಬಂದಿ ಬ್ಯಾಂಡ್ ಬಾರಿಸೋದನ್ನು ನೋಡಲು ಸಾರ್ವಜನಿಕರೂ ಸ್ಥಳದಲ್ಲಿ ಜಮಾಯಿಸಿದರು.
Advertisement
Advertisement
ಕಾರ್ಮಿಕ ಸಂಘಟನೆಯ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಎಲ್‍ಐಸಿ ಕಚೇರಿ, ಬ್ಯಾಂಕುಗಳ ಮುಂಭಾಗ, ಬಿಎಸ್ ಎನ್ ಎಲ್ ಕಚೇರಿಗಳ ಮುಂದೆ ಕೆಲಕಾಲ ಪ್ರತಿಭಟನೆ ಮಾಡಿದರು.
Advertisement
ಇದನ್ನು ಹೊರತುಪಡಿಸಿ ಉಡುಪಿಯಲ್ಲಿ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಚಿತ್ರ ಮಂದಿರ ಎಂದಿನಂತೆ ತೆರೆದಿವೆ. ಒಟ್ಟಾರೆ ಉಡುಪಿ ಮಾತ್ರವಲ್ಲದೆ ಗಂಗೊಳ್ಳಿ, ಕುಂದಾಪುರ, ಕಾರ್ಕಳ, ಕಾಪು ತಾಲೂಕಿನಲ್ಲೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv