Tuesday, 16th October 2018

Recent News

ತೆರೆಯ ಮೇಲೆ ಅಬ್ಬರಿಸಲು ಬರ್ತಿದ್ದಾನೆ `ಭರತ್ ಅನೆ ನೇನು’

ಹೈದರಾಬಾದ್: ಟಾಲಿವುಡ್‍ನ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಬಹು ನಿರೀಕ್ಷಿತ ‘ಭರತ ಅನೆ ನೇನು’ ನಾಳೆ ದೇಶಾದ್ಯಂತ ರಿಲೀಸ್ ಆಗಲಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಬಾಲಿವುಡ್ ಚೆಲುವೆ ಕೈರಾ ಅದ್ವಾನಿ ನಟನೆಯ ಮೊದಲ ತೆಲಗು ಸಿನಿಮಾ ಇದಾಗಿದೆ. ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿರುವ ಭರತ್ ಅನೆ ನೇನು ಸಿನಿ ರಸಿಕರಲ್ಲಿ ಕುತೂಹಲದ ಬುಗ್ಗೆಯನ್ನು ಹುಟ್ಟುಹಾಕಿದೆ.

ಈಗಾಗಲೇ ಟ್ರೇಲರ್ ಮತ್ತು ಮೇಕಿಂಗ್ ವಿಡಿಯೋಗಳಿಂದ ಭರತ್ ಅನೆ ನೇನು ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಿದೆ ಅಂತಾ ಸಿನಿ ರಸಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳ ತುದಿಗಾಲಲ್ಲಿ ನಿಂತಿದ್ದಾರೆ. ಈ ಐದು ಕಾರಣಗಳಿಗಾಗಿ ‘ಭರತ್ ಅನೆ ನೇನು’ ಚಿತ್ರವನ್ನು ನೋಡಬೇಕೆಂದು ಮಹೇಶ್ ಬಾಬು ಅಭಿಮಾನಿಗಳು ಹೇಳುತ್ತಿದ್ದಾರೆ.

1. ಈ ತಿಂಗಳ ಬ್ಲಾಕ್‍ಬಾಸ್ಟರ್ ಸಿನಿಮಾ: ಏಪ್ರಿಲ್ ನಲ್ಲಿ ಬಿಡಗಡೆ ಆಗುತ್ತಿರುವ ಅದ್ಧೂರಿ ವೆಚ್ಚದ ಮಲ್ಟಿ ಸ್ಟಾರ್ ಗಳನ್ನು ಹೊಂದಿರುವ ಸಿನಿಮಾ ಇದಾಗಿದೆ. ಏಪ್ರಿಲ್ 27ಕ್ಕೆ ಬಿಡುಗಡೆ ಆಗಬೇಕಿದ್ದ ‘ಕಾಳಾ ಕರಿಕಾಳನ್’ ಕಾರಣಾಂತರಗಳಿಂದ ಮುಂದೂಡಲಾಗಿದೆ. ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ’ ಮೇ 4ರಂದು ತೆರೆಕಾಣಲಿದೆ.

2. ಕೊರಟಾಲ ಶಿವಾ: ಈ ಹಿಂದೆ ಬ್ಲಾಕ್‍ಬಾಸ್ಟರ್ ಸಿನಿಮಾ ನೀಡಿರುವ ಕೊರಟಾಲ ಶಿವಾ ನಿರ್ದೇಶನದಲ್ಲಿ ಭರತ್ ಅನೆ ನೇನು ಮೂಡಿ ಬಂದಿದೆ. ಪ್ರಭಾಸ್ ಅಭಿನಯದ ‘ಮಿರ್ಚಿ’ ಚಿತ್ರದ ಮೂಲಕ ನಿರ್ದೇಶನದ ಕೆರಿಯರ್ ಆರಂಭಿಸಿರುವ ಕೊರಟಾಲ ಶಿವಾ ಶ್ರೀಮಂತುಡು ಮತ್ತು ಜನತಾ ಗ್ಯಾರೇಜ್ ನಂತಹ ಬ್ಲಾಕ್‍ಬಾಸ್ಟರ್ ಸಿನಿಮಾ ನೀಡಿದ್ದಾರೆ. ಸಿನಿಮಾ ಕಥೆಯಲ್ಲಿ ಹಿಡಿತದ ಜೊತೆಗೆ ಪ್ರಬುದ್ಧತೆಯನ್ನು ಕಾಯ್ದುಕೊಳ್ಳುವ ಶಿವಾ ಈ ಬಾರಿಯೂ ಎಂದಿನಿಂತೆ ಚಿತ್ರದ ನಿರೀಕ್ಷೆ ಹುಟ್ಟಲು ಕಾರಣರಾಗಿದ್ದಾರೆ.

3. ಮಹೇಶ್ ಬಾಬು: ಇನ್ನು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಮಹೇಶ್ ಬಾಬು ಚಿತ್ರದ ಮೇನ್ ಅಟ್ರ್ಯಾಕ್ಷನ್ ಸ್ಟಾರ್. ತಮ್ಮ ನೆಚ್ಚಿನ ನಟನ ಸಿನಿಮಾ ಬರುತ್ತೆ ಎಂಬ ವಿಷಯ ತಿಳಿಯುತ್ತಲೆ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸಾಲು ಹೆಚ್ಚುತ್ತಾರೆ. ಚಿತ್ರದಲ್ಲಿ ಮಹೇಶ್ ಬಾಬು ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

4. ಶ್ರೀಮಂತಡು ಬಳಿಕ ಒಂದಾದ ಜೋಡಿ: ಟಾಲಿವುಡ್ ನಲ್ಲಿ ಶ್ರೀಮಂತುಡು ಎಂಬ ಸೂಪರ್ ಹಿಟ್ ಸಿನಿಮಾ ನೀಡಿರುವ ಜೋಡಿ ಇಂದು ಜೊತೆಯಾಗಿದ್ದಾರೆ. ಕೊರಟಾಲ ಶಿವಾ ಮತ್ತು ಮಹೇಶ್ ಬಾಬು ಒಂದಾಗಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಗಲಿದೆ ಅಂತಾ ಹೇಳಲಾಗುತ್ತಿದೆ.

5. ಮ್ಯೂಸಿಕ್: ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ರಾಮ್‍ಚರಣ್ ಅಭಿನಯದ ‘ರಂಗಸ್ಥಳಂ’ ಸಿನಿಮಾಗೂ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ.

Leave a Reply

Your email address will not be published. Required fields are marked *