ನವದೆಹಲಿ: ಇಂಡಿಯಾ (India) ಅಥವಾ ಭಾರತ್ (Bharat) ಪದ ಬಳಕೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಜಿ20 ಶೃಂಗಸಭೆಯಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿನಿಧಿಸುವ ನಾಮಫಲಕದಲ್ಲಿ (Name Plate) ಇಂಡಿಯಾ ಬದಲು ಭಾರತ್ ಎನ್ನುವ ಪದವನ್ನು ಬಳಕೆ ಮಾಡಲಾಗಿದೆ.
ಜಿ20 ಅಂತರಾಷ್ಟ್ರೀಯ ಸಭೆಯಾಗಿರುವ ಹಿನ್ನೆಲೆ ಸಜಹವಾಗಿ ಇಂಡಿಯಾ ಎನ್ನುವ ಪದ ಬಳಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಭಾರತ್ ಎನ್ನುವ ಪದ ಬಳಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಂತಿದೆ. ಇದನ್ನೂ ಓದಿ: ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ
Advertisement
Advertisement
ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಏರ್ಪಡಿಸಿರುವ ವಿಶೇಷ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎನ್ನುವ ಪದ ಬಳಕೆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಕೇಂದ್ರ ಸರ್ಕಾರ ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳಲಿದ್ದು, ಭಾರತ್ ಎನ್ನುವ ಒಂದೇ ಹೆಸರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?
Advertisement
ಇದಕ್ಕೆ ಪೂರಕ ಎನ್ನುವಂತೆ ಇಂದು ಭಾರತ ಜಿ20 ಸಭೆಯ ಅಧ್ಯಕ್ಷತೆ ವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಆಸಿನರಾಗಿದ್ದ ಕುರ್ಚಿ ಮುಂಭಾಗದಲ್ಲಿ ಇಂಡಿಯಾ ಬದಲು ಭಾರತ್ ಪದ ಬಳಕೆ ಮಾಡಲಾಗಿತ್ತು. ಭಾಷಣ ಅಂತ್ಯವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ನಾನೊಬ್ಬ ಹೆಮ್ಮೆಯ ಹಿಂದೂ: ರಿಷಿ ಸುನಕ್
Advertisement
ಸರ್ಕಾರವು ಹಲವಾರು ಅಧಿಕೃತ ಜಿ20 ದಾಖಲೆಗಳಲ್ಲಿ ಭಾರತದೊಂದಿಗೆ ದೇಶಕ್ಕೆ ಸಂವಿಧಾನದಲ್ಲಿ ಬಳಸಲಾದ ‘ಭಾರತ್’ ಎಂಬ ಹೆಸರನ್ನು ಬಳಸಿದೆ. ಇದೊಂದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅಧಿಕೃತ ಮೂಲಗಳು ಹೇಳಿವೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್
Web Stories