ಶಿವಮೊಗ್ಗ: ತಾಲೂಕಿನ ಸಕ್ರೆಬೈಲು (Sakrebyle) ಬಿಡಾರದ ಆನೆ (Elephant) ಭಾನುಮತಿ (37) ಶನಿವಾರ ಹೆಣ್ಣು ಮರಿಗೆ ಜನ್ಮನೀಡಿದೆ. ತಾಯಿ ಹಾಗೂ ಮರಿ ಆನೆ ಎರಡೂ ಆರೋಗ್ಯದಿಂದ ಇವೆ ಎಂದು ಅರಣ್ಯಾಧಿಕಾರಿಗಳು (Forest Officer) ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಗರ್ಭಿಣಿ ಭಾನುಮತಿ ಆನೆ ಬಿಡಾರದಿಂದ ಕಾಡಿಗೆ ಮೇಯಲು ಹೋದಾಗ ಆಕೆಯ ಬಾಲಕ್ಕೆ ಕಿಡಿಗೇಡಿಗಳು ಕತ್ತಿಯಿಂದ ಗಾಯ ಮಾಡಿದ್ದರು. ವೈದ್ಯರು ಅದಕ್ಕೆ ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆ ನೀಡಿದ್ದರು. ನಂತರ ಭಾನುಮತಿ ಚೇತರಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆಗೂ ಸಹ ಆದೇಶಿಸಿತ್ತು. ಇದನ್ನೂ ಓದಿ: ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ
- Advertisement3
ಇದಾದ ಮೂರನೇ ವಾರಕ್ಕೆ ಭಾನುಮತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಾಲ್ಕನೇ ಮರಿ ಇದಾಗಿದೆ. ಈಕೆಯ ಯಾವುದೇ ಮರಿಗಳು ಬೆಳವಣಿಗೆ ಆಗಿಲ್ಲವೆಂದು ತಿಳಿದು ಬಂದಿದೆ. ಇದನ್ನೂ ಓದಿ: 9 ಉಗ್ರರ ಹತ್ಯೆ – ಎಲ್ಲರನ್ನೂ ನರಕಕ್ಕೆ ಕಳುಹಿಸಿದ್ದೇವೆ ಎಂದ ಪಾಕ್ ಸೇನೆ
- Advertisement
ಸದ್ಯ ಸಕ್ರಬೈಲಿನಲ್ಲಿ ಆನೆಯ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ದಸರಾ ಮೆರವಣಿಗೆಗೆ ಬಂದ ನೇತ್ರಾವತಿ ಎಂಬ ಆನೆ ಸಹ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದಾದ 15 ದಿನಕ್ಕೆ ಭಾನುಮತಿ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ 6 ಹೆಣ್ಣು ಮತ್ತು 16 ಗಂಡು ಆನೆಗಳಿವೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್