lಲಕ್ನೋ: ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಜನರು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಾರೆ. ಅದರಂತೆ ಇಲ್ಲಿ ಅಣ್ಣ-ತಂಗಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮದುವೆಯಾಗಿರುವ ವಿಲಕ್ಷಣ ಪ್ರಕರಣ ವರದಿಯಾಗಿದೆ.
Advertisement
ಡಿಸೆಂಬರ್ 11 ರಂದು ಉತ್ತರ ಪ್ರದೇಶದ ಫಿರೋಜಾಬಾದ್‍ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮದುವೆಯಾದ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ ಉಡುಗೊರೆಗಳನ್ನು ಹೊರತುಪಡಿಸಿ 35,000 ರೂ. ಕೊಡುತ್ತದೆ. ಈ ಯೋಜನೆಯ ಪ್ರಕಾರ, ವಧುವಿನ ಬ್ಯಾಂಕ್ ಖಾತೆಗೆ 20,000 ರೂ. ಠೇವಣಿ ಮಾಡಿ, 10,000 ರೂ. ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಹಿನ್ನೆಲೆ ಇದೇ ಊರಿನ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದು, ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO
Advertisement
ಫಿರೋಜಾಬಾದ್‍ನ ತುಂಡ್ಲಾದಲ್ಲಿ ವಿವಾಹ ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ದಂಪತಿಯನ್ನು ಸಹೋದರ ಮತ್ತು ಸಹೋದರಿಯೆಂದು ಗುರುತಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಮದುವೆಯ ವೀಡಿಯೋಗಳು ಮತ್ತು ಫೋಟೋಗಳು ಪ್ರಸಾರವಾದ ನಂತರ, ಗ್ರಾಮಸ್ಥರು ಈ ಸಾಮೂಹಿಕವಾಗಿ ವಿವಾಹವಾದ ದಂಪತಿ ಪೈಕಿ ಒಬ್ಬರನ್ನು ಸಹೋದರ ಮತ್ತು ಸಹೋದರಿ ಎಂದು ಗುರುತಿಸಿದ್ದಾರೆ.
Advertisement
Advertisement
ಏನಿದು ಘಟನೆ?
ಪಂಜಾಬಿ ವ್ಯಕ್ತಿಯೊಬ್ಬ ತನ್ನ ಸ್ವಂತ ಸಹೋದರಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಸಲುವಾಗಿ ಈ ಕೃತ್ಯವನ್ನು ಮಾಡಿದ್ದಾನೆ. ಬಟಿಂಡಾದ ಹಳ್ಳಿಯ ನಿವಾಸಿಯಾಗಿರುವ ಮನ್‍ಪ್ರೀತ್ ಸಿಂಗ್ 2012 ರಿಂದ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ನೆಲೆಸಿದ್ದಾನೆ. ಅವರ ಸಹೋದರಿ ಅಮನ್‍ದೀಪ್ ಕೌರ್ ಕೂಡ ಆಸ್ಟ್ರೇಲಿಯಾಕ್ಕೆ ಹೋಗಲು ಬಯಸಿದ್ದು, ಹಲವು ಬಾರಿ ವೀಸಾಗೆ ಅಪ್ಲೈ ಮಾಡಿದ್ದರೂ ಅದು ರಿಜೆಕ್ಟ್ ಆಗುತ್ತಿತ್ತು. ಹಾಗಾಗಿ ಈ ಸಹೋದರ-ಸಹೋದರಿ ನಕಲಿ ವಿವಾಹದ ಕುತಂತ್ರವನ್ನು ರೂಪಿಸಿದರು. ಪರಿಣಾಮ ತುಂಡ್ಲಾ ಬ್ಲಾಕ್ ಡೆವಲಪ್‍ಮೆಂಟ್ ಕಛೇರಿಯ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 51 ಜೋಡಿಗಳು ವಿವಾಹವಾಗಿದ್ದು, ಅದರಲ್ಲಿ ಜೋಡಿಯೂ ಮದುವೆಯಾಗಿದೆ. ಇದನ್ನೂ ಓದಿ: ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ
ತುಂಡಲ ಬ್ಲಾಕ್ ಅಭಿವೃದ್ಧಿ ಅಧಿಕಾರಿ ನರೇಶ್‍ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಪ್ರಕರಣದ ಬಗ್ಗೆ ತಿಳಿದ ತಕ್ಷಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸಹೋದರನ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದ್ದು, ಯೋಜನೆಯಡಿ ‘ದಂಪತಿ’ಗೆ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನೂ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು.