– ಕಾಂಗ್ರೆಸ್ ಎಲ್ಲಾ ನಾಟಕಗಳನ್ನು ಬಿಡಬೇಕು
ತುಮಕೂರು: ವಿಕೃತ ಮನಸ್ಸಿನವರಿಗೆ ಆರ್‌ಎಸ್‌ಎಸ್ ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಖಂಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದು ವಿಕೃತ ಮಾನಸಿಕತೆಯ ವರ್ಗ ಇದೆ. ಅವರು ಆರ್‍ಎಸ್‍ಎಸ್‍ನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಜಾತಿ ಓಲೈಕೆಗಾಗಿ ಕಳೆದ 70 ವರ್ಷಗಳಿಂದ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ಕೊಡುವ ಮುನ್ನ ಒಂದು ಬಾರಿ ಶಾಖೆಗೆ ಹೋಗಿ ಬರಬೇಕು. ದೇಶ ಭಕ್ತಿ, ಶಿಸ್ತು ಅದರಲ್ಲಿ ಕಲಿಸಲಾಗುತ್ತದೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಭಾರತವನ್ನು ವಿಶ್ವಗುರು ಮಾಡುವ ಸಂಸ್ಕಾರ ಅದರಲ್ಲಿ ಕಲಿಸಲಾಗುತ್ತದೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಕುರಿತು ಪ್ರತಿ ಕ್ರಿಯೆ ನೀಡಿದ ಅವರು, ಕಳೆದ ಐದಾರು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಿಯಂತ್ರಣದಲ್ಲಿದೆ. ನಾಲ್ಕೈದು ದಿನದಿಂದ ನಡೆಯುತ್ತಿರುವ ಘಟನೆಗೆ ಕೇಂದ್ರ ಸರ್ಕಾರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು
ಚಿತ್ರದುರ್ಗದ ಮುರಿಘಾಮಠಕ್ಕೆ ಭೇಟಿ ನೀಡಿ, ಪೂಜ್ಯರಾದ ಶ್ರೀ. ಶಿವಮೂರ್ತಿ ಮುರುಘಾ ಶರಣ ಸ್ವಾಮಿಜಿಯವರ ಆಶೀರ್ವಾದ ಪಡೆದುಕೊಳ್ಳಲಾಯಿತು. ನನ್ನ ಜೊತೆ ರಾಜ್ಯದ ಕೃಷಿ ಸಚಿವರಾದ ಮಾನ್ಯ ಶ್ರೀ. ಬಿ.ಸಿ.ಪಾಟೀಲ್ ರವರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು. pic.twitter.com/KUQumaSPSN
— Bhagwanth Khuba (@bhagwantkhuba) October 13, 2021
ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ ಮಂತ್ರಪಠಣ ಮಾಡಿದ ವಿಚಾರವಾಗಿ ಪ್ರಿಯಾಂಕಾ ವಾದ್ರಾಗೆ ಮಂತ್ರ ಬರುತ್ತಾ? ಆ ಕುಟುಂಬದವರು ಕೇವಲ ಚುನಾವಣೆ ಸಂದರ್ಭದಲ್ಲಿ ಹಿಂದು ಆಗೋದು, ಮುಸ್ಲಿಂರನ್ನು ಓಲೈಕೆ ಮಾಡಲು ಅವರ ಟೋಪಿ ಹಾಕಿಕೊಳ್ಳೋದು, ಆಗಾಗ ಕ್ರಿಶ್ಚಿಯನ್ ಆಗೋದು, ಈ ಎಲ್ಲಾ ನಾಟಕಗಳನ್ನು ಅವರು ಬಿಡಬೇಕು. ನಿಮ್ಮ ಜಾತಿ ಯಾವೋದು ಅದರಲ್ಲಿ ಭಕ್ತಿ ಇಡಿ, ಆದರೆ ಇಂಥಹ ಡೋಂಗಿತನ ಬಿಡಬೇಕು ಎಂದು ಕಾಂಗ್ರೆಸ್ ವಿರುದ್ಧವಾಗಿ ವಾಗ್ದಾಳಿ ನಡೆಸಿದರು.