ಚಂಡೀಗಢ: ಸಿಖ್ಖರ ನಾಡಿನಲ್ಲಿ ಇದೇ ಮೊದಲ ಬಾರಿ ಆಮ್ ಆದ್ಮಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಇಂದು ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಾಟ್ಕರ್ ಕಲಾನ್‍ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಆಪ್ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ರಾಜಧಾನಿಯ ಹೊರಗೆ ಪ್ರಮಾಣ ವಚನ ನಡೀತಿರೋದು ವಿಶೇಷವಾಗಿದ್ದು, ಸಿಎಂ ಜೊತೆ 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 3 ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್
ಭಗವಂತ್ ಮಾನ್ ದುರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ದಲ್ವಿರ್ಸಿಂಗ್ ಗೋಲ್ಡಿ 24,306 ಮತಗಳಿಸಿದ್ದು, ಭಗವಂತ್ ಮಾನ್‍ಗೆ 82,023 ಮತಗಳನ್ನು ಗಳಿಸಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವ್ಯವಹಾರದ ಆದೇಶವೆಂದರೆ ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದಾಗಿದೆ ಎಂದು ಗೆಲುವಿನ ಬಳಿಕ ಘೋಷಿಸಿದ್ದರು. ಇದನ್ನೂ ಓದಿ: ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್
ಜೊತೆಗೆ ಮಹಿಳೆಯರ ಸುರಕ್ಷತೆ ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವುದಾಗಿದೆ. ಅಲ್ಲದೆ ಒಂದು ತಿಂಗಳೊಳಗೆ ಪಂಜಾಬ್‍ನಲ್ಲಿ ಬದಲಾವಣೆಯನ್ನು ಕಾಣುತ್ತೀರಿ ಎಂದು ಭರವಸೆ ನೀಡಿದ್ದರು. ಆಮ್ ಆದ್ಮಿ ಪಕ್ಷವು ಪಂಜಾಬ್‍ನಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 91 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿತ್ತು.
ಇತ್ತ ಗೋವಾದಲ್ಲಿ ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಸಿಎಂ ಆಯ್ಕೆ ನಡೆಯಲಿದೆ. ಹಾಲಿ ಸಿಎಂ ಪ್ರಮೋದ್ ಸಾವಂತ್ ಹಾಗೂ ಸಚಿವ ವಿಶ್ವಜಿತ್ ರಾಣೆ ರೇಸ್‍ನಲ್ಲಿದ್ದಾರೆ. ಇದನ್ನೂ ಓದಿ: ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ: ಕೇಜ್ರಿವಾಲ್