ಶಿವಮೊಗ್ಗ : ಭದ್ರಾವತಿಗೂ, ಕೆ.ಆರ್. ಪೇಟೆಗೂ, ಮಂಡ್ಯ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಇವತ್ತು ಭದ್ರಾವತಿಯ ಜೆಡಿಎಸ್, ಕಾಂಗ್ರೆಸ್ ಹಲವು ಮುಖಂಡರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇದು ಅವರು ಮಾಡಿರುವ ಒಳ್ಳೆಯ ತೀರ್ಮಾನ ಎಂದು ರೇಷ್ಮೆ ಮತ್ತು ಯುವಜನ ಸೇವಾ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್ ಬಗ್ಗೆ ಮಾತೇ ಆಡಲ್ಲ. ಭದ್ರಾವತಿಯಲ್ಲಿ ಕಮಲ ಅರಳಿಸೋಣ, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದುಡಿಯೋಣ ಎಂದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್
ಭದ್ರಾವತಿಯ ಜೆಡಿಎಸ್ ಮುಖಂಡ ಎಸ್. ಕುಮಾರ್, ಕಾಂಗ್ರೆಸ್ ಮುಖಂಡ ಸತೀಶ್ ಸೇರಿದಂತೆ ಹಲವರು ಬಿಜೆಪಿ ಸೇರಿದರು. ಇದೇ ವೇಳೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್‍ನ ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಇದನ್ನೂ ಓದಿ: ಸ್ಟೇಷನ್‍ನಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ – ಹೊತ್ತಿ ಉರಿದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಮೇಘರಾಜ್, ಎಂಎಲ್‍ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್‍ಸಿ ಭಾನುಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.