ಹಾಸನ: ಜಿಲ್ಲೆಯ ಅರಸೀಕರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಭದ್ರಕಾಳಿ ಮೂರ್ತಿ ಕಣ್ಣುಬಿಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಡೆಕೆರೆ ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಳೆದ ಮಹಾಲಯ ಅಮಾವಾಸ್ಯೆ ದಿನದಂದು ದೇವಸ್ಥಾನದ ಪೂಜೆ ಸಂದರ್ಭದಲ್ಲಿ ಭದ್ರಕಾಳಿ ಮೂರ್ತಿಯು ಕಣ್ಣು ಬಿಟ್ಟಂತೆ ಗೋಚರಿಸಿದೆ. ತಕ್ಷಣ ಭಕ್ತಾದಿಯೊಬ್ಬರು ಅದನ್ನು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ತಂಡೋಪತಂಡವಾಗಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
Advertisement
Advertisement
ಬೆಂಡೆಕೆರೆ ಗ್ರಾಮದ ಹೊರಭಾಗದಲ್ಲಿ ಈ ದೇವಾಲಯ ಇದ್ದು, ಅಮವಾಸ್ಯೆಗಳಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಮಹಾಲಯ ಅಮಾವಾಸ್ಯೆಯ ದಿನದಂದು ಭದ್ರಕಾಳಿ ಕಣ್ಣು ತೆರೆದಿದ್ದು, ಆ ವಿಡಿಯೋ ತಡವಾಗಿ ವೈರಲ್ ಆಗಿದೆ. ಈ ಹಿಂದೆಯೂ ಕೂಡ ಅಮವಾಸ್ಯೆ ದಿನ ಈ ರೀತಿಯ ಪವಾಡ ನಡದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
Advertisement
ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಇದೆ. ಈ ಹಿಂದೆ ದೇವಿ ಮೂರ್ತಿ ಕಣ್ಣು ಬಿಟ್ಟಾಗ ಫೋಟೋವನ್ನು ತೆಗೆದಿದ್ದೆ. ಈಗ ಮಹಾಲಯ ಅಮಾವಾಸ್ಯೆ ದಿನ ಸಂಜೆ ಕುಂಕುಮ ತೆಗೆದುಕೊಂಡು ಬರೋಣ ಎಂದು ದೇವಾಲಯದ ಬಳಿ ಹೋಗಿದ್ದೆ. ಆಗ ದೇವಿ ಕಣ್ಣು ಬಿಟ್ಟು ಗೋಚರಿಸುತ್ತಿತ್ತು. ಅದನ್ನು ವಿಡಿಯೋ ಮಾಡಿದ್ದೇವೆ. ನಾನು ಮಾತ್ರವಲ್ಲ ಅಲ್ಲಿದ್ದ ಹತ್ತಾರು ಜನರು ಅದನ್ನು ನೋಡಿದ್ದಾರೆ ಎಂದು ಸ್ಥಳೀಯ ಚಂದ್ರು ಅವರು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=M2rIA8MjG90