ಪಣಜಿ: ಆಗಸ್ಟ್ 15 ರಿಂದ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದವರಿಗೆ 2,500 ರೂ. ದಂಡ ವಿಧಿಸುವುದಾಗಿ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಘೋಷಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಅವರು, ಆಗಸ್ಟ್ ನಲ್ಲಿ ಯಾರಾದರೂ ಸಾರ್ವಜನಿಕವಾಗಿ ಮದ್ಯಸೇವನೆ ಮಾಡುವುದು ಕಂಡು ಬಂದಲ್ಲಿ ಹೆಚ್ಚಿನ ದಂಡ ವಿಧಿಸಲಾಗುವುದು. ಹಾಗಾಗಿ ಮುಂಚಿತವಾಗಿಯೇ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ಈ ಸಂಬಂಧ ಶೀಘ್ರವೇ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದರು.
Advertisement
ಕಾಲೇಜು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದ ಅವರು, ಸಾರ್ವಜನಿಕವಾಗಿ ನದಿ ಬಳಿ ಮದ್ಯಪಾನ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ನಾನು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದೇನೆ. ಮದ್ಯಪಾನ ಮಾಡಿದ ಬಳಿಕ ಅದನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಪರಿಸರ ಹಾಳಾಗುವುದಲ್ಲದೇ, ಕಲ್ಲಿನ ಮೇಲೆ ಎಸೆಯುವುದರಿಂದ ಅಪಾಯವು ಹೆಚ್ಚು ಎಂದು ಹೇಳಿದರು.
Advertisement
ಈ ಹಿಂದೆ ಮನೋಹರ್ ಪರಿಕ್ಕರ್ ಅವರು, ಹುಡುಗಿಯರೂ ಮದ್ಯಪಾನ ಮತ್ತು ಬಿಯರ್ ಕುಡಿಯಲು ಶುರು ಮಾಡಿಕೊಂಡಿದ್ದಾರೆ. ಇದರಿಂದಾಗಿ ನನಗೀಗ ಭಯ ಹಾಗೂ ಆತಂಕ ಶುರುವಾಗಿದೆ ಎಂದು ಹೇಳಿದ್ದರು.
Advertisement
Goa Chief Minister Manohar Parrikar announces that the government would soon be issuing a notification regarding imposing a heavy fine on drinking alcohol in public
Read @ANI Story |https://t.co/gfyRT1I7LF pic.twitter.com/61Mufau9r9
— ANI Digital (@ani_digital) July 16, 2018
Advertisement
This decision of the government to impose fines on littering & public drinking… we need tourists who obey our rules. Goa should be pollution free and for that, we will strictly follow these guidelines by CM Manohar Parrikar: Manohar Ajgaonkar, Goa Tourism Minister pic.twitter.com/reHqaHVJru
— ANI (@ANI) July 17, 2018