ನವೆಂಬರ್ ತಿಂಗಳು ಬರುತ್ತಿದ್ದಂತೆಯೇ ಚಳಿ, ಗಾಳಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನ ಚಳಿಯಿಂದ ಬೆಚ್ಚಗಿರಲು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗಿರುತ್ತಾರೆ. ಅಲ್ಲದೇ ಚಳಿಗಾಲದಲ್ಲಿ ಎಂತಹ ಉಡುಪುಗಳನ್ನು ಧರಿಸಬೇಕು ಎಂಬುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ವರ್ಷಾಂತ್ಯದಲ್ಲಿ ಬರುವ ಚಳಿಗಾಲದಲ್ಲಿ ಜನರ ಕಣ್ಣು ಕುಕ್ಕುವಂತಹ ನಾನಾ ವೆರೈಟಿ ಹೊದಿಕೆಗಳು, ಸ್ಟೆಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.
Advertisement
ಅಲೆನ್ ಸೋಲಿ ಮೆನ್ ಸ್ವೆಟ್‍ಶರ್ಟ್
ಕಿತ್ತಳೆ ಬಣ್ಣದ ಈ ಸ್ವೆಟ್‍ಶರ್ಟ್ ನಿಮ್ಮನ್ನು ಬೆಚ್ಚಗಿರಿಸುವುದಷ್ಟೇ ಅಲ್ಲದೇ ಸಖತ್ ಅಟ್ರ್ಯಾಕ್ಟಿವ್ ಲುಕ್ ನೀಡುತ್ತದೆ. ಇದು ಚಳಿಗಾಲದಲ್ಲಿಯೂ ಬೇಸಿಗೆ ಎಂಬಂತಹ ಭಾವನೆ ಮೂಡಿಸುವಷ್ಟು ನಿಮ್ಮನ್ನು ಬೆಚ್ಚಗಿರಿಸುತ್ತದೆ. ಜೊತೆಗೆ ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ನೂಲಿನಿಂದ ಮಾಡಲಾಗಿರುವ ಈ ಜಾಕೆಟ್ ಮದ್ಯದಲ್ಲಿ ಜಿಪ್ ಇರುವುದನ್ನು ಕಾಣಬಹುದಾಗಿದೆ.
Advertisement
Advertisement
ಮಾಂಟೆ ಕಾರ್ಲೊ ವುಮೆನ್ಸ್ ಬ್ಲಾಕ್ ಪಾರ್ಕ್ ಜಾಕೆಟ್
ಮುಂಭಾಗ ಜಿಪ್ ಮತ್ತು ಬಟನ್‍ಗಳೊಂದಿಗೆ, ದೊಡ್ಡ ಜೇಬಿಗಳಿರುವ ಈ ಜಾಕೆಟ್ ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಫ್ಯಾಶನ್ ಲುಕ್ ನೀಡುವ ಈ ಜಾಕೆಟ್ ಉಷ್ಣಾಂಶವನ್ನು ಹೆಚ್ಚಾಗಿಸುತ್ತದೆ. ಈ ಜಾಕೆಟ್ ಅನ್ನು ಜೀನ್ಸ್ ಜೊತೆಗೆ ಶೂಗಳೊಂದಿಗೆ ಧರಿಸುವುದರಿಂದ ಬೆಸ್ಟ್ ಎಂದೇ ಹೇಳಬಹುದು.
Advertisement
ಜಾಮ್ & ಹನಿ ಬಾಯ್ಸ್ ಸ್ವೆಟರ್
ಸ್ಲೀವ್ಸ್ ಇಲ್ಲದ ಈ ಸ್ವೆಟರ್ ಕುತ್ತಿಗೆ ಪೂರ್ತಿ ಬರುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಲರ್ ಉಡುಪು ಚೆನ್ನಾಗಿಯೇ ಕಾಣಿಸುತ್ತದೆ. ಸದ್ಯ ಈ ಸ್ವೆಟರ್ ಕೂಡ ಬ್ಲಾಕ್ ಕಲರ್ ಆಗಿದ್ದು, ಮದ್ಯದಲ್ಲಿ ಬಿಳಿ ಬಣ್ಣದ ಸ್ಟಾರ್ ಡಿಸೈನ್ ಎದ್ದು ಕಾಣುತ್ತದೆ. ವಿಷೇಶವೆಂದರೆ ಈ ಸ್ವೆಟರ್ ಅನ್ನು ಯಾವುದೇ ಶರ್ಟ್ ಮೇಲೆ ಬೇಕಾದರೂ ಧರಿಸಬಹುದಾಗಿದೆ.
ಸಿಂಬಲ್ ಗರ್ಲ್ಸ್ ಜಾಕೆಟ್
ಯೆಲ್ಲೋ ಕಲರ್‌ನ ಈ ಜಾಕೆಟ್ ಹುಡುಗಿಯರಿಗೇ ಚಳಿಗಾಲದಲ್ಲಿ ಬೆಸ್ಟ್ ಎಂದೇ ಹೇಳಬಹುದು. ಈ ಜಾಕೆಟ್‍ನ ಮುಂಭಾಗದಲ್ಲಿ ಜಿಪ್ ಇರುತ್ತದೆ. ಈ ಜಾಕೆಟ್ ಒಳಗಡೆ ಕಪ್ಪು ಲೈನಿಂಗ್ ಮತ್ತು ಮ್ಯಾಂಡರಿನ್ ಕಾಲರ್ ಇದೆ. ಇದು ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಧರಿಸಲು ಕಂಫರ್ಟ್ ಆಗಿರುತ್ತದೆ.