`ಪಠಾಣ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್

Public TV
1 Min Read
deepika 1

ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathan) ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸಂಕಷ್ಟ ಎದುರಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ `ಬೇಷರಂ ರಂಗ್’ ಹಾಡಿಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬೆನ್ನಲ್ಲೇ `ಬೇಷರಂ ರಂಗ್’ (Beshramrang) ಹಾಡಿನ ಜೊತೆ ಚಿತ್ರದಲ್ಲಿನ ಅನೇಕ ದೃಶ್ಯಗಳನ್ನ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

sharukh khan

ಶಾರುಖ್, ದೀಪಿಕಾ ಪಡುಕೋಣೆ(Deepika Padukone) ನಟನೆಯ `ಪಠಾಣ್’ (Pathan) ಚಿತ್ರ ರಿಲೀಸ್‌ಗೂ ಮುನ್ನವೇ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದಲ್ಲಿನ ದೀಪಿಕಾ ಕೇಸರಿ ಬಿಕಿನಿ ವಿಚಾರಕ್ಕೆ ಅನೇಕರು ವಿರೋಧಿಸಿದ್ದಾರೆ. ದೀಪಿಕಾ ಅವರ ಬೋಲ್ಡ್ ಲುಕ್ ನೋಡಿದವರೆಲ್ಲಾ, ಇಷ್ಟೊಂದು ಎಕ್ಸ್ಪೋಸ್ ಬೇಕಿರಲಿಲ್ಲ ಎಂದು ತಕರಾರು ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಪಠಾಣ್ ಚಿತ್ರತಂಡಕ್ಕೆ ಶಾಕ್ ಕೊಟ್ಟಿದೆ. `ಬೇಷರಂ ರಂಗ್’ ಹಾಡಿನ ಜೊತೆ ಚಿತ್ರದಲ್ಲಿನ ಹಲವು ದೃಶ್ಯಗಳನ್ನ ತೆಗೆಯಲು ಸೆನ್ಸಾರ್ ಮಂಡಳಿಯ ಅಧ್ಯಕ್ಷರು ಪ್ರಸೂನ್ ಜೋಶಿ ಹೇಳಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಕಟ್ಟುನಿಟ್ಟಾಗಿ ಚಿತ್ರತಂಡಕ್ಕೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

Deepika Padukone

ಸಿದ್ಧಾರ್ಥ್ ಆನಂದ್ (Siddarth) ನಿರ್ದೇಶನದ `ಪಠಾಣ್’ ಜನವರಿ 25ರಂದು ತೆರೆಗೆ ಬರಲಿದೆ. ರಿಲೀಸ್‌ಗೂ ಮುನ್ನ ಚಿತ್ರದಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಸಿನಿಮಾಗೆ ಸೆನ್ಸಾರ್ ಪತ್ರ ಕೂಡ ಸಿಗುವುದು ತಡವಾಗಲಿದೆ.

deepika padukone 1

ಇನ್ನೂ ಶಾರುಖ್ ಖಾನ್ ಅವರ ಕಮ್‌ಬ್ಯಾಕ್ ಚಿತ್ರವಾಗಿರುವ ಕಾರಣ, ಚಿತ್ರದ ಬಗ್ಗೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *