ಬೆಂಗಳೂರು: ಬೆಸ್ಕಾಂ ಡಿಜಿಟಲ್ ಮೀಟರ್ (BESCOM Digital Mitre) ಅಳವಡಿಕೆಯನ್ನ ಶುರು ಮಾಡಿದಾಗ ಇದರ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಯಾವಾಗ ಡಿಜಿಟಲ್ ಮೀಟರ್ ಹಾಕಿದ ನಂತರದ ತಿಂಗಳ ಕರೆಂಟ್ ಬಿಲ್ (Power Bill) ಹಲವರಿಗೆ ಶಾಕ್ ನೀಡಿದೆ.
Advertisement
ಬೆಂಗಳೂರಿನಲ್ಲಿ ಬೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು ಅತ್ಯಂತ ವೇಗವಾಗಿ ಮಾಡ್ತಿದೆ. ಈಗಾಗಲೇ ಸುಮಾರು 3 ಲಕ್ಷ ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನ ಬೆಸ್ಕಾಂ ಮಾಡಿದೆ. ಈ ಡಿಜಿಟಲ್ ಮೀಟರ್ ಜನಸ್ನೇಹಿ ಅಂತ ಫ್ರೀಯಾಗಿ ಮೀಟರ್ ಅಳವಡಿಕೆ ಮಾಡಲಾಗ್ತಿದೆ. ಆದರೆ ಈಗ ಡಿಜಿಟಲ್ ಮೀಟರ್ ಅಳವಡಿಕೆಯ ನಂತರ ಮೊದಲ ಬಿಲ್ ನೋಡಿ ಬೆಂಗಳೂರಿಗರು ಶಾಕ್ ಆಗಿದ್ದಾರೆ. ಬರುತ್ತಿದ್ದ ಬಿಲ್‍ಗಿಂತ ಏಕ್ ಧಮ್ ಎರಡು ಪಟ್ಟು ಹೆಚ್ಚಾಗಿದ್ದು ಅವರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ
Advertisement
Advertisement
ಬೆಸ್ಕಾಂನ ನೂತನ ಪ್ರಯೋಗದ ವಿರುದ್ಧ ಈಗ ವಿರೋಧ ಕೇಳಿ ಬರುತ್ತಿದ್ದು, ಹಳೆ ಮೀಟರ್ ತೆಗೆದು ಹೊಸ ಡಿಜಿಟಲ್ ಮೀಟರ್ ಅಳವಡಿಸಿ ವಂಚಿಸುತ್ತಿದೆಯಾ ಬೆಸ್ಕಾಂ ಎಂಬ ಅನುಮಾನದಲ್ಲೇ ಬೆಂಗಳೂರಿಗರು ದೂರು ಕೊಡಲು ಮುಂದಾಗಿದ್ದಾರೆ. ಹಳೆಯ ಬಿಲ್‍ಗಿಂತಲೂ ಶೇ.97 ಕರೆಂಟ್ ಬಿಲ್ ಏರಿಕೆಯಾಗಿದೆ ಎಂದು ಕಂಗಲಾಗಿದ್ದಾರೆ.
Advertisement
ಬೆಸ್ಕಾಂ ವ್ಯಾಪ್ತಿಯಲ್ಲಿ 116.69 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಎಲ್ಲಾ ವಿಭಾಗಗಳಲ್ಲಿ ಹಂತ- ಹಂತವಾಗಿ ಡಿಜಿಟಲ್ ಮೀಟರ್‍ಗಳನ್ನು ಅಳವಡಿಕೆ ಮಾಡಲಾಗ್ತಿದೆ. ಪ್ರಾರಂಭದಿಂದಲೂ ಒಳ್ಳೆಯ ರೆಸ್ಪಾನ್ಸ್ ಇದ್ದ ಡಿಜಿಟಲ್ ಮೀಟರ್ ಬಗ್ಗೆ ಬಿಲ್ ಬರಲು ಶುರು ಮಾಡಿದ ಕೂಡಲೇ ಅದರ ಬಂಡವಾಳ ಬಯಲಾಗಿದೆ ಅಂತ ಜನ ಆಕ್ರೋಶಗೊಂಡಿದ್ದಾರೆ. ಕೂಡಲೇ ಇದನ್ನ ಬೆಸ್ಕಾಂ ಸರಿಪಡಿಸುವ ಕೆಲಸ ಶೀಘ್ರವಾಗಿ ಮಾಡಬೇಕಿದೆ.