ಬೆಸ್ಕಾಂ ವಿದ್ಯುತ್ ಅದಾಲತ್ – 3,671 ಗ್ರಾಹಕರು ಭಾಗಿ

Public TV
2 Min Read
BESCOM Bengaluru Consumer 1

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ಶನಿವಾರ ಆಯೋಜಿಸಿದ್ದ(ಜೂನ್ 18) ವಿದ್ಯುತ್ ಅದಾಲತ್‍ನಲ್ಲಿ 3,671 ಗ್ರಾಹಕರು ಭಾಗವಹಿಸಿ 1,142 ಮನವಿಗಳನ್ನು ಸಲ್ಲಿಸಿದ್ದಾರೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಂದ ಹಿಡಿದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದ ವಿದ್ಯುತ್ ಅದಾಲತ್‍ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರಿಂದ ಸ್ವೀಕೃತವಾದ 1,142 ಮನವಿಗಳ ಪೈಕಿ 321 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 821 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮೋದಿ ತನ್ನ ಬಾಲ್ಯ ಸ್ನೇಹಿತ ಅಬ್ಬಾಸ್‍ನನ್ನು ಕೇಳಲಿ: ಓವೈಸಿ 

BESCOM Bengaluru Consumer

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಶೀಘ್ರ ಪರಿಹಾರಕ್ಕೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಎಲ್ಲ ಬೆಸ್ಕಾಂಗಳಲ್ಲಿ ವಿದ್ಯುತ್ ಅದಾಲತ್‍ಗಳನ್ನು ಆಯೋಜಿಸಬೇಕೆಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಮೊದಲ ವಿದ್ಯುತ್ ಅದಾಲತ್ ಶನಿವಾರ ಆಯೋಜಿಸಿತ್ತು.

ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ 654 ಗ್ರಾಹಕರು ಅದಾಲತ್‍ನಲ್ಲಿ ಭಾಗವಹಿಸಿ 209 ಮನವಿಗಳನ್ನು ಸಲ್ಲಿಸಿದರು. ಸುಮಾರು 57 ಮನವಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ. ದಾವಣಗೆರೆ ಜಿಲ್ಲೆಯ 7 ತಾಲೂಕುಗಳ ಗ್ರಾಮಿಣ ಭಾಗಗಳಲ್ಲಿ ನಡೆದ ಅದಾಲತ್ ನಲ್ಲಿ 557 ಗ್ರಾಹಕರು ಪಾಲ್ಗೊಂಡು ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಸೆಳೆದರು.

BESCOM Bengaluru Consumer 2

ರಾಮನಗರ ಜಿಲ್ಲೆ-616, ಬೆಂಗಳೂರು ನಗರ ಜಿಲ್ಲೆ-532, ಚಿತ್ರದುರ್ಗ ಜಿಲ್ಲೆ-437, ಕೋಲಾರ ಜಿಲ್ಲೆ-293 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 271 ಗ್ರಾಹಕರು ವಿದ್ಯುತ್ ಅದಾಲತ್‍ನಲ್ಲಿ ಭಾಗವಹಿಸಿ ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಮುಂದಿಟ್ಟರು. ಮೇಲಾಧಿಕಾರಿಗಳಿಗೆ ರವಾನಿಸಿರುವ 821 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

ಹೆಚ್ಚುವರಿ ಟ್ರಾನ್ಸ್ ಫಾರ್ಮರ್, ಬಿಲ್ಲಿಂಗ್, ವಿದ್ಯುತ್ ವ್ಯತ್ಯಯ, ಹೊಸ ಸಂಪರ್ಕ, ಹೊಸ ಟ್ರಾನ್ಸ್ ಫಾರ್ಮರ್, ಎಲ್‍ಟಿಲೈನ್ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್‍ನಲ್ಲಿ ಅಧಿಕಾರಿಗಳ ಗಮನ ಸೆಳೆದರು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *