ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಅಲ್ಪ ಕಾಲಾವಧಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಜಗತ್ತಿನ ಕೆಲವು ದೇಶಗಳಲ್ಲಿ ಇದು ಹೊಸದಲ್ಲ. ಹಲವು ದೇಶಗಳಲ್ಲಿ ಈಗಾಗಲೇ ಈ ರೀತಿಯ ಯೋಜನೆ ಜಾರಿಯಾಗಿದೆ.
ಇಸ್ರೇಲ್
ಪುರುಷರು ಕನಿಷ್ಠ 3 ವರ್ಷ, ಮಹಿಳೆಯರು ಕನಿಷ್ಠ 2 ವರ್ಷ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ. ವಿದೇಶಗಳಲ್ಲಿ ಇರುವ ಪೌರರಿಗೂ ಇದು ಅನ್ವಯವಾಗುತ್ತದೆ. ವಲಸೆಗಾರರಿಗೆ, ಕೆಲ ಅನ್ಯ ಧರ್ಮೀಯರಿಗೆ, ರೋಗಿಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ
Advertisement
Advertisement
ದಕ್ಷಿಣ ಕೊರಿಯಾ
ಸದೃಢ ಪುರುಷರಿಗೆ ಸೇನೆ ಕರ್ತವ್ಯ ಕಡ್ಡಾಯ. 21 ತಿಂಗಳು ಭೂಸೇನೆ, 23 ತಿಂಗಳು ನೌಕಾಸೇನೆ, 24 ತಿಂಗಳು ವಾಯುಸೇನೆಯಲ್ಲಿ ಕೆಲಸ ಮಾಡಬೇಕು.
Advertisement
ಉತ್ತರ ಕೊರಿಯಾ
ದೇಶದ ಪ್ರಜೆಗಳು ಸೇನೆ ಸೇರುವುದು ಕಡ್ಡಾಯ. ಪುರುಷರು 11 ವರ್ಷ, ಮಹಿಳೆಯರು 7 ವರ್ಷ ಸೇನೆಯಲ್ಲಿ ಕೆಲಸ ಕಡ್ಡಾಯ.
Advertisement
ಎರ್ರಿಟ್ರಿಯಾ
ಪುರುಷರು, ಅವಿವಾಹಿತ ಯುವತಿಯರು ಕನಿಷ್ಠ 18 ತಿಂಗಳು ಸೇನೆಯಲ್ಲಿರಬೇಕು(ಇದು ಹೆಚ್ಚಾಗಲೂಬಹುದು).
ಸ್ವಿಟ್ಜರ್‌ಲ್ಯಾಂಡ್
18-34 ವರ್ಷದೊಳಗಿನ ಪುರುಷರಿಗೆ ಸೈನ್ಯದಲ್ಲಿ ಕೆಲಸ ಕಡ್ಡಾಯ. 21 ವರ್ಷಗಳ ಕಾಲ ಕಡ್ಡಾಯ ಕೆಲಸ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ಸೈನಿಕ ಶಿಕ್ಷಣ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್
ಬ್ರೆಜಿಲ್
ವಯಸ್ಕ ಪುರುಷರು 10-12 ತಿಂಗಳು ಸೇನೆಯಲ್ಲಿರುವುದು ಕಡ್ಡಾಯ(ಓದುತ್ತಿದ್ದರೆ ಶಿಕ್ಷಣ ಮುಗಿದ ಕೂಡಲೇ ಸೇನೆ ಸೇರಬೇಕು)
ಸಿರಿಯಾ
ಸೇನೆಯಲ್ಲಿ ಕೆಲಸ ಮಾಡಿಲ್ಲ ಎಂದರೇ ಉದ್ಯೋಗ ಸಿಗಲ್ಲ. ಸರ್ವೀಸ್ ತಪ್ಪಿಸಿಕೊಂಡವರಿಗೆ 15 ವರ್ಷದವರೆಗೂ ಜೈಲು.
ಇದೇ ರೀತಿ, ಜಾರ್ಜಿಯಾ, ಲಿಥುವೇನಿಯಾ, ಸ್ವೀಡನ್‍ನಲ್ಲಿಯೂ ಕಡ್ಡಾಯ ಸೈನಿಕ ಸೇವೆ ಕಡ್ಡಾಯವಾಗಿದೆ.