ಚಿನ್ನಸ್ವಾಮಿ ಸ್ಟೇಡಿಯಂ ಪವರ್ ಕಟ್ ಮಾಡಿದ ಬೆಸ್ಕಾಂ

Public TV
1 Min Read
chinnaswamy stadium

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ ಸಂಭವಿಸಿ 11 ಸಾವನ್ನಪ್ಪಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್‌ (Electricity) ಸಂಪರ್ಕವನ್ನು ಬೆಸ್ಕಾಂ ಕಟ್ ಮಾಡಿದೆ.

Chinnaswamy Stadium

ಅಗ್ನಿಸುರಕ್ಷತಾ ಮುನ್ನೆಚ್ಚರಿಕೆ ‌ಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸದ ಹಿನ್ನಲೆ, ರಾಜ್ಯ ಅಗ್ನಿಶಾಮಕದಳದ ಪೋಲಿಸ್ ಮಹಾ ನಿರ್ದೇಶಕರಿಂದ ಕೆಎಸ್‌ಸಿಎದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಎಂಡಿಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: UGCET – ಜು.1 ರಿಂದ ಆನ್‍ಲೈನ್ ಮೂಲಕ ತಿದ್ದುಪಡಿಗೆ ಕೊನೆ ಅವಕಾಶ ನೀಡಿದ ಕೆಇಎ

ಈ ಹೀಗಾಗಿ ಬೆಸ್ಕಾಂನಿಂದ ಚಿನ್ನಸ್ವಾಮಿ ‌ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಅಂತಾ ಬೆಸ್ಕಾಂನ ಏಕ್ಸ್ ಕ್ಯೂಟಿವ್ ಇಂಜಿನಿಯರ್ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಸದ್ಯ ಜನರೇಟರ್‌ನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಕಟ್ಟಡಕ್ಕೆ ಬಳಸಲಾಗುತ್ತಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅವಾಂತರ – 18 ಸ್ಥಳಗಳಲ್ಲಿ ಭೂಕುಸಿತದ ಆತಂಕ, 259 ಪ್ರಮುಖ ರಸ್ತೆಗಳು ಬಂದ್‌

Share This Article