ಜೆರುಸಲೇಂ: ನನ್ನ ಮಗನನ್ನು ಕೊಲ್ಲಲು ಇರಾನ್ ಪ್ರಯತ್ನಿಸಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ನಂಬಲಾಗದ ಏನೋ ಸಂಭವಿಸಿದೆ. ಇರಾನ್ ನನ್ನ ಒಬ್ಬ ಮಗನನ್ನು ಟಾರ್ಗೆಟ್ ಮಾಡಿದೆ. ನನ್ನ ಒಬ್ಬ ಮಗನನ್ನು ಕೊಲ್ಲಲು ಪ್ರಯತ್ನಿಸಿದೆ ಎಂದಿದ್ದಾರೆ.
ಹತ್ಯೆಗೆ ಹೇಗೆ ಪ್ರಯತ್ನಿಸಲಾಗಿತ್ತು. ಯಾವಾಗ ಪ್ರಯತ್ನ ಮಾಡಲಾಯಿತು ಎಂಬುದರ ಕುರಿತು ಅವರು ಯಾವುದೇ ವಿವರಗಳನ್ನು ನೀಡಿಲ್ಲ. ನೆತನ್ಯಾಹು ಅವರಿಗೆ ಅವ್ನರ್ ಮತ್ತು ಯೈರ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಯಾರ ಹತ್ಯೆಗೆ ಯತ್ನ ನಡೆಯಿತು ಎಂಬುದು ಸ್ಪಷ್ಟಪಡಿಸಿಲ್ಲ.
