ಬೆಂಗಳೂರು: ಸ್ಪೀಕರ್ ಕಚೇರಿಗೆ ಆಗಮಿಸಲಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.
ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕರು ವಿಶೇಷ ವಿಮಾನದಲ್ಲಿ ಇಂದು ಸಂಜೆ 5ಕ್ಕೆ ಎಚ್‍ಎಎಲ್ ತಲುಪಲಿದ್ದಾರೆ. ಬಳಿಕ ಅವರು ಆದಷ್ಟು ಬೇಗ ಸ್ಪೀಕರ್ ಕಚೇರಿ ತಲುಪಬೇಕಿದೆ. ಹೀಗಾಗಿ ಎಚ್‍ಎಎಲ್‍ನಿಂದ ವಿಧಾನಸೌಧದವೆರಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ:ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?
Advertisement
Advertisement
ಶಾಸಕರಿಗೆ ಭದ್ರತೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಹೀಗಾಗಿ ವಿಧಾನಸೌಧದ ಸುತ್ತ-ಮುತ್ತ 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ. ಮಾರ್ಷಲ್ ಗಳ ಜೊತೆಗೆ ಮಫ್ತಿಯಲ್ಲೂ ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ. ಈ ಮೂಲಕ ಅತೃಪ್ತ ಶಾಸಕರು ಭಾರೀ ಭದ್ರತೆಯ ನಡುವೆ ಆಗಮಿಸಿ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.