ಬೆಂಗಳೂರು: ಭೂತಾನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಬೆಂಗಳೂರಿನ ಗೌತಮ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಉತ್ತರಹಳ್ಳಿಯ ನಿವಾಸಿಯಾಗಿರುವ ಗೌತಮ್ ಜನವರಿಯಲ್ಲಿ ನಡೆದ ಟೇಕ್ವಾಂಡೋ ಚಾಂಪಿಯನ್‍ಶಿಪ್ ನಲ್ಲಿ 86 ಕೆಜಿ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಪರ್ಧಿ ವಿರುದ್ಧ ಗೆದ್ದು ದೇಶಕ್ಕೆ ಚಿನ್ನದ ಪದಕ ಪಡೆದ್ದಾರೆ. ವಿಶೇಷ ಏನೆಂದರೆ ಭಾಗವಹಿಸಿದ ಮೊದಲ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
Advertisement
Advertisement
ಗೌತಮ್ ಚಿಕ್ಕ ವಯಸ್ಸಿನಿಂದಲೇ ಟೇಕ್ವಾಂಡೋ ಗೇಮ್‍ನಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು. ತಾಯಿ ತುಳಸಿ ಅವರ ಸಹಕಾರದಿಂದ ಬಾಲ್ಯದಿಂದಲೇ ಟೇಕ್ವಾಂಡೋ ಆಟವನ್ನು ಅಭ್ಯಾಸ ಮಾಡಿಕೊಂಡು ಬಂದ ಗೌತಮ್ ಈಗ ತಾವೇ ಮಾಸ್ಟರ್ ಆಗಿದ್ದಾರೆ.
Advertisement
ಖಾಸಗಿ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಗೌತಮ್ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಟೇಕ್ವಾಂಡೋ ಟ್ರೈನಿಂಗ್ ನೀಡುತ್ತಿದ್ದಾರೆ. ಮಗನ ಸಾಧನೆ ಬಗ್ಗೆ ಸಂತಸಗೊಂಡಿರುವ ತಾಯಿ ತುಳಸಿ ಅವರು ಮಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಂದು ಹರಿಸಿದ್ದಾರೆ.
Advertisement
ಟೇಕ್ವಾಂಡೋ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆಯಾಗಿದ್ದು, ಕೇವಲ ಕಾಲಿನ ಕಿಕ್‍ನಲ್ಲೇ ಈ ಆಟ ನಡೆಯುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv