ಬೆಂಗಳೂರು: ಸ್ವಂತ ಅಕ್ಕನ ಆಭರಣಗಳನ್ನೇ ಕದ್ದು ತಂಗಿಯೊಬ್ಬಳು ಕದ್ದು ಜೈಲು ಸೇರಿದ ಪ್ರಕರಣವೊಂದು ನಗರದಲ್ಲಿ (Bengaluru) ವರದಿಯಾಗಿದೆ.
ಅಕ್ಕನ ಜೊತೆ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ, ಆಭರಣಗಳ ಮೇಲೆ ಕಣ್ಣು ಹಾಕಿದ್ದ ತಂಗಿ ಕತ್ತಲಲ್ಲಿ ಅಕ್ಕನ ಬ್ಯಾಗ್‍ನಲ್ಲಿ ಕೈಯಾಡಿಸಿ ಆಭರಣ ಕದ್ದಿದ್ದಾಳೆ. ದಂಡು ರೈಲು ನಿಲ್ದಾಣ ಬರುತ್ತಿದ್ದಂತೆ ಸದ್ದಿಲ್ಲದೇ ಚಿನ್ನಾಭರಣ ದೋಚಿ ಏನೂ ಗೊತ್ತಿಲ್ಲದವಳಂತೆ ಸುಮ್ಮನಿದ್ದಳು. ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ್ದ ಅಕ್ಕ ಲಲಿತಾಗೆ ಚಿನ್ನಾಭರಣ ಕಳುವಾಗಿರುವುದು ತಿಳಿದಿದೆ. ಇದನ್ನೂ ಓದಿ: ಸಾಲ ಮರುಪಾವತಿ ಮಾಡದ ಸ್ನೇಹಿತ – ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ದಂಪತಿ
ಆಭರಣ ಕಳವು ಬಗ್ಗೆ ರೈಲ್ವೇ ಪೊಲೀಸರಿಗೆ (Police) ಲಲಿತಾ ದೂರು ನೀಡಿದ್ದಾರೆ. ಪೊಲೀಸರು ಲಲಿತಾಳ ತಂಗಿ ಚಂದ್ರ ಶರ್ಮಾಳ ನಡವಳಿಕೆ ಮೇಲೆ ಅನುಮಾನ ಪಟ್ಟು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಬಂಧಿತಳಿಂದ 8.50 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ಚಂದ್ರ ಶರ್ಮಾಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖತರ್ನಾಕ್ ಕಳ್ಳನ ಬಂಧನ – 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ