ಬೆಂಗಳೂರು: ಕಾವೇರಿ ನೀರಿನಿಂದ (Cauvery Water) ಕಾರನ್ನು ಸ್ವಚ್ಛಗೊಳಿಸಿದ ಮೂವರಿಗೆ ಬೆಂಗಳೂರು ಜಲಮಂಡಳಿ (BWSSB) 5 ಸಾವಿರ ರೂ. ದಂಡ (Fine) ವಿಧಿಸಿದೆ.
ಸದಾಶಿವನಗರದಲ್ಲಿ ಕಾರನ್ನು ಸ್ವಚ್ಛಗೊಳಿಸಿದ ಮಹಿಳೆಗೆ ಸ್ಥಳದಲ್ಲೇ 5 ಸಾವಿರ ದಂಡ ವಿಧಿಸಿದೆ. ಅದೇ ರೀತಿಯಲ್ಲಿ ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಇಬ್ಬರಿಗೆ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಸೋನು ಶ್ರೀನಿವಾಸ ಗೌಡ ಯಾವುದೇ ಹಣದ ಸಹಾಯ ಮಾಡಿಲ್ಲ- ಪೊಲೀಸರಿಂದ ಸ್ಥಳ ಮಹಜರು
- Advertisement
ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಈಗಾಗಲೇ ಜಲಮಂಡಳಿ ಈಗಾಗಲೇ ಸೂಚನೆ ನೀಡಿದೆ. ಸೂಚನೆ ಹೊರತಾಗಿಯೂ ಕಾರನ್ನು (Car) ಸ್ವಚ್ಛ ಮಾಡಿದ್ದಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
- Advertisement
ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಮಾಡಲು, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಇತ್ಯಾದಿ ಬಳಕೆಗೆ ಕುಡಿಯುವ ನೀರನ್ನು ಬಳಸದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಜಲಮಂಡಳಿ ಪ್ರಕಟಣೆಯ ಮೂಲಕ ನಿಷೇಧ ಈಗಾಗಲೇ ಆದೇಶವನ್ನು ಜಾರಿ ಮಾಡಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ