ಬೆಂಗಳೂರು: ಏನಪ್ಪಾ.. ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ ಎಂದು ಪ್ರಶ್ನಿಸುವ ಎನ್ನುವ ಮೂಲಕ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ನವಲಗುಂದದ ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿಯನ್ನು ಕಿಚಾಯಿಸಿದ ಪ್ರಸಂಗ ನಡೆದಿದೆ.
ವಿಧಾನಸೌಧದಲ್ಲಿ ಬಿಜೆಪಿ ನಾಯಕರಾದ ಈಶ್ವರಪ್ಪ, ನಡಹಳ್ಳಿ ಮತ್ತು ರೇಣುಕಾಚಾರ್ಯ ವಾಕ್ ಮಾಡುತ್ತಿದ್ದರು. ಈ ವೇಳೆ ಎದುರಿಗೆ ಬಂದ ಕೋನರೆಡ್ಡಿಯನ್ನು ಬಿಜೆಪಿ ನಾಯಕರು ಕಾಲೆಳೆದಿದ್ದಾರೆ.
ಏನಪ್ಪಾ ಕೊನರೆಡ್ಡಿ.. ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ? ಎಂದು ಈಶ್ವರಪ್ಪ ಕಾಲೆಳೆದರೆ, ಏನು ಸಿಎಂ ಆಗೋಕೆ ಭಾರೀ ತಯಾರಿನಾ ಎಂದ ಕೋನರೆಡ್ಡಿ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮಧ್ಯ ಪ್ರವೇಶಿಸಿದ ನಡಹಳ್ಳಿ ಬತ್ತಿ ಇಡೋದು ಬೆಂಕಿ ಹಚ್ಚೋದು ನಿಮ್ ಕೆಲಸನಾ ಎಂದು ಟೀಕಿಸಿದ್ದಾರೆ. ಇದಕ್ಕೆ ಮರು ಉತ್ತರ ನೀಡದ ಕೋನರೆಡ್ಡಿ ನಗುತ್ತಲೇ ಹೋಗಿದ್ದಾರೆ.