ಬೆಂಗಳೂರು: ಪ್ರವಾಹ, ಅತಿವೃಷ್ಟಿ ಪರಿಣಾಮ ನುಗ್ಗೆಕಾಯಿ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 300 ರೂ. ಗಡಿದಾಟಿದೆ.
ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಹೀಗಾಗಿ ಹೆಚ್ಚಿನ ಗ್ರಾಹಕರು ನುಗ್ಗೆಕಾಯಿ ಖರೀದಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನುಗ್ಗೆಕಾಯಿ ಸೇರಿದಂತೆ ಸೊಪ್ಪು, ತರಕಾರಿ ಬೆಲೆ ನಾಶವಾಗಿವೆ. ಪರಿಣಾಮ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ನುಗ್ಗೆಕಾಯಿ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆಯಾಗುತ್ತಿದೆ.
Advertisement
Advertisement
ಕಳೆದ 10 ದಿನಗಳಲ್ಲಿ ಕಡಿಮೆ ಇದ್ದ ನುಗ್ಗೆಕಾಯಿ ಬೆಲೆ ದರ 200 ರೂ. ಗಡಿದಾಟಿದೆ. ಶುಕ್ರವಾರ ಒಂದು ಕೆಜಿ ನುಗ್ಗೆಕಾಯಿ 312 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದು ಹಾಪ್ ಕಾಮ್ಸ್ ಗಳಲ್ಲಿ ಒಂದು ಕೆ.ಜಿ ನುಗ್ಗೆಕಾಯಿಯು 349 ರೂಪಾಯಿಗೆ ಮಾರಾಟವಾಗುತ್ತಿದೆ. ಈ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Advertisement
ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಹೊಂದಿದೆ. ಇದು ಆರೋಗ್ಯವರ್ಧಕ ತರಕಾರಿ. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.
Advertisement
ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು. 100 ಗ್ರಾಂ ನುಗ್ಗೆಯಲ್ಲಿ 9.4 ಗ್ರಾಂ ಪ್ರೋಟೀನ್, ಶೇ. 151 ವಿಟಮಿನ್ ಎ, ಶೇ.86 ವಿಟಮಿನ್ ಸಿ, ಶೇ. 18 ಕ್ಯಾಲ್ಸಿಯಮ್ ಹಾಗೂ ಶೇ.22 ರಷ್ಟು ಕಬ್ಬಿನ ಅಂಶ ಇರುತ್ತದೆ. ನುಗ್ಗೆಕಾಯಿ ರಫ್ತಿನಲ್ಲಿ ಭಾರತವು ವಿಶ್ವದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ. ಭಾರತವು ಶೇ.80ರಷ್ಟು ನುಗ್ಗೆ ರಫ್ತು ಮಾಡಿದರೆ, ಏಷಿಯಾ ಪೆಸಿಫಿಕ್ ಶೇ. 9ರಷ್ಟು ರಫ್ತು ಮಾಡುತ್ತದೆ. ಉಳಿದಂತೆ ಆಫ್ರಿಕಾ ಶೇ. 8 ಹಾಗೂ ಅಮೆರಿಕ ಶೇ.3 ರಷ್ಟು ರಫ್ತು ಮಾಡುತ್ತವೆ.