ಬಿಜೆಪಿ ಅವಧಿಯಲ್ಲಿ ಮಳೆ ಬಂದಾಗ ಬೆಂಗಳೂರು ತೇಲುತ್ತಿತ್ತು: ಡಿಕೆ ಸುರೇಶ್

Public TV
2 Min Read
DK Suresh

ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ಮಳೆ (Rain) ಬಂದಾಗ ಬೆಂಗಳೂರು (Bengaluru) ತೇಲುತ್ತಿತ್ತು. ನಮ್ಮ ಸರ್ಕಾರದಲ್ಲಿ ಮಳೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಬಿಜೆಪಿಯಿಂದ ಡಿಕೆ ಶಿವಕುಮಾರ್ ವಿರುದ್ಧ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಕಾಲದಲ್ಲಿ ಬೆಂಗಳೂರು ತೇಲುತ್ತಿತ್ತು. ಬಿಜೆಪಿ ಅವರು ಮರೆತು ಹೋಗಿದ್ದಾರೆ ಅನ್ನಿಸುತ್ತದೆ. ಪ್ರಕೃತಿ ನಡುವೆ ಯಾರು ಏನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಅವಧಿಯಲ್ಲಿ ಲೂಟರ್‌ಗಳು ಏನು ಮಾಡಿದ್ರು ಎಲ್ಲಾ ಬಾಕಿ ಕೊಡಬೇಕಾದರೆ 3 ವರ್ಷ ಬೇಕು. ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ. ಅದನ್ನು ಸರಿ ಮಾಡಬೇಕಾದರೆ ಕಾಲಾವಕಾಶ ಬೇಕಾಗುತ್ತದೆ ಎಂದರು. ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್‌

ಸಿಎಂ, ಡಿಸಿಎಂ ಅವರು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮುಂದಾಗಿದ್ದಾರೆ. ರಾಜಕಾಲುವೆ ಮೇಲೆ ಮನೆ ಕಟ್ಟಿದ್ದಾರೆ. ಅದಕ್ಕೆ ಯಾವುದೇ ನಿಯಮ ಇಲ್ಲ. ಇದಕ್ಕೆ ಬಿಜೆಪಿ ಕಡಿವಾಣ ಹಾಕಿರಲಿಲ್ಲ. ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕಾನೂನು ಮಾಡಲು ಚಿಂತನೆ ಮಾಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಖಂಡಿತ ಮುಂದಿನ ದಿನಗಳಲ್ಲಿ ಸಿಗಲಿದೆ. ಕಳೆದ ಬಾರಿ ಎಲ್ಲೆಲ್ಲಿ ಸಮಸ್ಯೆ ಆಗಿತ್ತು, ಈಗ ಅದು ಸರಿ ಹೋಗಿದೆ. ಎಲ್ಲಿ ಬಿಜೆಪಿ ಶಾಸಕರು ಸತತವಾಗಿ ಗೆದ್ದು ಬರುತ್ತಿದ್ದಾರೆ ಅಲ್ಲಿ ಏನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಅವರು ಹೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

ಸುಮಾರು 2 ಸಾವಿರ ಕೋಟಿ ರಾಜಕಾಲುವೆ ಸರಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಏನೇ ಮಾಡಬೇಕಾದರೂ ಆರ್ಥಿಕ ವ್ಯವಸ್ಥೆ ನೋಡಿಕೊಂಡು ಮಾಡಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪಡಿಸಲು ಸಿಎಂ ಅವರು ಮುಂದಿನ 3-4 ವರ್ಷಗಳ ಕಾಲ ಅನುದಾನ ಕೊಡುತ್ತಾರೆ. ಡಿಪಿಆರ್ ರೆಡಿ ಆಗುತ್ತಿದೆ. ಅದೆಲ್ಲ ಆದ ಮೇಲೆ ಬೆಂಗಳೂರಿಗೆ ಹೊಸ ರೂಪ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಹೈವೇಯಲ್ಲಿ ನಿಂತ ಬಸ್ಸನ್ನು ತಳ್ಳಿದ ಮಹಿಳೆಯರು

ಈಗ ಏನೇ ಅನಾಹುತ ಆಗುತ್ತಿದ್ದರೂ ಬಿಜೆಪಿ ಅವರು ಸತತವಾಗಿ ಗೆದ್ದು ಬರುತ್ತಿರುವ ಕ್ಷೇತ್ರದಲ್ಲಿ ಅವ್ಯವಸ್ಥೆ ಆಗುತ್ತಿದೆ. ಅದಕ್ಕೆ ಏನು ಕಾರಣ ಎಂದು ಬಿಜೆಪಿ ಅವರು ಹೇಳಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್‌ – ಪೇಜ್‌ ವಿರುದ್ಧ ಎಫ್‌ಐಆರ್‌

Share This Article