ಬೆಂಗಳೂರು: ನಗರದ ಬಿಬಿಎಂಪಿ (BBMP) ವ್ಯಾಪ್ತಿಯ 8 ವಲಯಗಳಲ್ಲೂ 10 ಮಿಮೀ ಮಳೆಯಾಗಿದೆ. ರಾತ್ರಿಯಿಂದ ಕೊಂಚ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದೆ.
ನಗರದ 12 ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಸಂಪಗಿರಾಮನಗರ, ಬಾಣಸವಾಡಿ, ಹಗಡೂರು, ರಾಜ್‍ಮಹಲ್ ಗುಟ್ಟಹಳ್ಳಿ, ಕೆಂಗೇರಿ ಚಾಮರಾಜ ಪೇಟೆಯಲ್ಲಿ 20 ಮಿಮೀ ಮಳೆಯಾಗಿದೆ. ಕಾಟನ್‍ಪೇಟೆ, ಕಮ್ಮನಹಳ್ಳಿ, ವನ್ನಾರ್ ಪೇಟೆ, ಕೊಟ್ಟಿಗೆಪಾಳ್ಯ, ಕುಶಾಲ್ ನಗರದ ಸುತ್ತಮುತ್ತ 10 ಮಿಮೀ ಮಳೆಯಾಗಿದೆ. ಇದನ್ನೂ ಓದಿ: ಮಹಿಳೆಯ ತಲೆ ತುಳಿದು ಕೊಂದ ಕಾಡಾನೆ
Advertisement
Advertisement
ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತವಾರಣ ಇರಲಿದ್ದು, ಸಂಜೆ ವೇಳೆಗೆ ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 30ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Advertisement
Advertisement
ರಾಜ್ಯದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದೆ. ಈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು – ಐವರು ಜಲಸಮಾಧಿ