ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ 70 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

Public TV
1 Min Read
nagabhushan

ಟ ನಾಗಭೂಷಣ್ (Actor Nagabhushan) ಕಾರು ಅಪಘಾತ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೆಎಸ್ ಲೇಔಟ್ ಸಂಚಾರ ಪೊಲೀಸರು ಆಕ್ಸಿಡೆಂಟ್ ಸಂಬಂಧ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ನಾಗಭೂಷಣ್ ವಿರುದ್ಧ ಹಲವು ಸಾಕ್ಷಿಗಳನ್ನ ಕೋಣನ ಕುಂಟೆ ಪೊಲೀಸರು ಕಲೆಹಾಕಿದ್ದಾರೆ. ಇದನ್ನೂ ಓದಿ:Deepavali: ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ- ರಾಧಿಕಾ ಪಂಡಿತ್

nagabhushan 3

ಸೆಪ್ಟೆಂಬರ್ 30ರ ರಾತ್ರಿ ವಸಂತಪುರ ರಸ್ತೆಯ ಅಪಾರ್ಟ್ಮೆಂಟ್ ಬಳಿ ವಾಕಿಂಗ್ ಮಾಡುತ್ತಿದ್ದ ಕೃಷ್ಣ, ಪ್ರೇಮ ದಂಪತಿಗಳಿಗೆ ವೇಗವಾಗಿ ಬಂದ ನಟ ನಾಗಭೂಷಣ್ ಕಾರು ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪತ್ನಿ ಪ್ರೇಮ ಸಾವನ್ನಪ್ಪಿದ್ರೆ, ಪ್ರೇಮ ಗಂಡ ಕೃಷ್ಣಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ರು. ಕೆಎಸ್ ಲೇಔಟ್ ಪೊಲೀಸರು ಕಾರು ಓಡಿಸ್ತಿದ್ದ ನಟನನ್ನ ಅರೆಸ್ಟ್ ಮಾಡಿ ಡ್ರಂಕ್ & ಡ್ರೈವ್ ಚೆಕ್ ಮಾಡಿ, ಪ್ರೊಸೀಜರ್ ಮುಗಿಸಿ, ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳಿಸಿದ್ದರು. ಇದೀಗ ಸಂಚಾರ ಪೊಲೀಸರು ನಟ ನಾಗಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.

nagabhushan 1

ನಾಗಭೂಷಣ್ ಮೇಲೆ ಸುಮಾರು 70ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಪೊಲೀಸರು ಫೈಲ್ ಮಾಡಿದ್ದಾರೆ. ಈ ಘಟನೆ ಬಗ್ಗೆ 50ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ. ಇನ್ನೂ ಪ್ರೇಮಾ ಹಾಗೂ ಕೃಷ್ಣ ಅವರು ಪಾದಾಚಾರಿ ಮಾರ್ಗದಿಂದ ನೇರ ರಸ್ತೆಗೆ ಇಳಿದಿದ್ದರು ಎಂದು ಹೇಳಿಕೆ ನೀಡಿದ್ದರು. ಏಕಾಏಕಿ ಕಾರಿಗೆ ಅಡ್ಡಲಾಗಿ ಬಂದ ಕಾರಣ ಕಾರ್ ಕಂಟ್ರೋಲ್ ಸಿಗದೆ ಆ್ಯಕ್ಸಿಡೆಂಟ್ ಅಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಕೃಷ್ಣ ಅವರ ಹೇಳಿಕೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ.

ವೇಗವಾಗಿ ಬಂದ ಕಾರು ಫುಟ್‌ಪಾತ್ ಮೇಲೆ ಹೋಗುತ್ತಿದ್ದಾಗ ನಾನು ಮತ್ತು ನನ್ನ ಪತ್ನಿ ಪ್ರೇಮ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ. ಮುಂದೆ ಕೋರ್ಟ್‌ನಲ್ಲಿ ಟ್ರಯಲ್ ಆರಂಭವಾಗಲಿದ್ದು, ಸಮನ್ಸ್ ಜಾರಿಯಾದಾಗ ಕೋರ್ಟ್‌ ಹಿಯರಿಂಗ್‌ಗಳನ್ನ ನಟ ಅಟೆಂಡ್ ಮಾಡಬೇಕು. ವಾದ ಪ್ರತಿವಾದ ನಡೆದು ಕೊನೆಗೆ ನ್ಯಾಯಾಧೀಶರಿಂದ ಆದೇಶ ಹೊರಬರಲಿದೆ.

Share This Article