– ಬಿಲ್ಡಪ್ ರಾಜನ ರಂಪಾಟ ಮೊಬೈಲ್‍ನಲ್ಲಿ ಸೆರೆ
ಬೆಂಗಳೂರು: ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿ ಚಾಲಕನೊಬ್ಬ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ ಘಟನೆ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
ಕೆಎ 02 ಎಂಎನ್ 5223 ಕಾರ್ ನಂಬರ್ ನ ಚಾಲಕ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ನಡು ರಸ್ತೆಯಲ್ಲೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಮಹಿಳಾ ಪೊಲೀಸರಿಗೆ ಗಾಡಿ ಮುಟ್ಟಿ ನೋಡೋಣ ಎಂದು ಬೆದರಿಕೆ ಹಾಕಿದ್ದಾನೆ. ಪತ್ನಿಯ ಮುಂದೆ ಚಾಲಕ ಬಿಲ್ಡಪ್ ತೋರಿಸುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದಾರೆ.
Advertisement
Advertisement
ಆಗಿದ್ದೇನು?:
ಸದಾಶಿವನಗರ ಟ್ರಾಫಿಕ್ ಮಹಿಳಾ ಸಿಬ್ಬಂದಿ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕೆಎ 02 ಎಂಎನ್ 5223 ಕಾರ್ ನಂಬರ್ ನ ಚಾಲಕ ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿದ್ದ. ತಕ್ಷಣವೇ ಅಲ್ಲಿಗೆ ಬಂದ ಮಹಿಳಾ ಪೊಲೀಸರು ಪ್ರಶ್ನಿಸಿದ್ದಾರೆ.
Advertisement
ಪೊಲೀಸ್ ಪ್ರಶ್ನಿಸಿದಕ್ಕೆ ಗರಂ ಆದ ಚಾಲಕ, ಕಾರ್ ಅನ್ನು ಯಾಕೆ ಮುಟ್ಟುತ್ತೀರಾ? ಗಾಡಿ ಮುಟ್ಟಿ ನೋಡೋಣ. ಕಾರ್ ಮುಟ್ಟೋಕೆ ಪರ್ಮೀಶನ್ ಕೊಟ್ಟಿದ್ಯಾರು? ಏ ನೆಟ್ಟಗೆ ಮಾತಾಡಮ್ಮ ಬಾಯಿ ಹೋದಂಗೆ ಮಾತನಾಡಬೇಡ ಎಂದು ಅವಾಜ್ ಹಾಕಿದ್ದಾನೆ.
Advertisement
ಈ ವೇಳೆ ಕಾರಿನಲ್ಲಿದ್ದ ಚಾಲಕನ ಪತ್ನಿ ಕೆಳಗೆ ಇಳಿದು ಬಂದು ಪೊಲೀಸರಿಗೆ ಕ್ಷಮೆ ಕೇಳಿದ್ದಾರೆ. ಇತ್ತ ಮಹಿಳಾ ಪೊಲೀಸರು ಸದಾಶಿವನಗರ ಪೊಲೀಸ್ ಠಾಣೆಗೆ ಕರೆ ಮಾಡುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ.