ಬೆಂಗಳೂರು: ಟ್ರಾಫಿಕ್ ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.
ಪಿಎಸ್‍ಐ ನಂಜುಂಡ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಪ್ಟೆಂಬರ್ ಒಂದರಿಂದ ಕೆಲವೊಂದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಆದರೆ ಇಲ್ಲಿನ ಪೊಲೀಸರು ಮಾತ್ರ ಈಗಲೇ ದಂಡವನ್ನು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
Advertisement
Advertisement
ಅಗಸ್ಟ್‍ನಲ್ಲಿಯೇ ಹೆಚ್ಚು ದಂಡ ಹಾಕಿದಕ್ಕೆ ದೇವಕಿ ಎಂಬವರು ಪಿಎಸ್‍ಐ ನಂಜುಂಡ ಎಂಬವರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಪಿಎಸ್‍ಐ ನಂಜುಂಡ ನೇರವಾಗಿ ಲೇಡಿ ಪೊಲೀಸ್‍ಗೆ ಅವಳನ್ನು ಸ್ಟೇಷನ್‍ಗೆ ಎಳೆದುಕೊಂಡು ಬಾ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೆ ಮಹಿಳಾ ಪೊಲೀಸ್ ದೇವಕಿ ಮೇಲೆ ಪರಚಿ ಹಲ್ಲೆ ಮಾಡಿದ್ದಾರೆ.
Advertisement
ಈ ವೇಳೆ ಪೊಲೀಸ್ ಹಾಗೂ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ದೇವಕಿ ಆರೋಪಿಸುತ್ತಿದ್ದಾರೆ. ಪೊಲೀಸರ ಈ ವರ್ತನೆಗೆ ನಾಗರಿಕರು ಕಿಡಿಕಾರಿದ್ದು, ಇದೇನಾ ನಿಮ್ಮ ಕಾರ್ಯವೈಖರಿ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
https://www.youtube.com/watch?v=Qq-UugAP79E