Connect with us

Bengaluru City

ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಹಾಡಿದ ಕಾರಣ ಬಿಚ್ಚಿಟ್ಟ ಡಿಸಿಪಿ ಚೇತನ್ ಸಿಂಗ್ ರಾಥೋಡ್

Published

on

ಬೆಂಗಳೂರು: ಕರುನಾಡಿನಲ್ಲಿ ಪೌರತ್ವದ ಜ್ವಾಲೆ ಉರಿಯುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದರೂ ಪ್ರತಿಭಟನೆಯ ಕಾವು ಜೋರಾಗಿದೆ. ಅದ್ರಂತೆ ಬೆಂಗಳೂರಿನ ಟೌನ್‍ಹಾಲ್ ನಲ್ಲಿಯೂ ನಿನ್ನೆ ಪ್ರತಿಭಟನೆ ನಡೆಯಿತು. ಈ ವೇಳೆ ಭದ್ರತೆಯ ನೇತೃತ್ವವಹಿಸಿದ್ದ ಡಿಸಿಪಿ ಚೇತನ್ ಸಿಂಗ್ ರಾಥೋಢ್ ಪ್ರತಿಭಟನಾನಿರತರನ್ನು ರಾಷ್ಟ್ರಗೀತೆ ಹಾಡುವ ಮೂಲಕ ಮನವೊಲಿಸಿದ ವಿಡಿಯೋ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು.

ಈ ಬಗ್ಗೆ ಇಂದು ಟೌನ್ ಹಾಲ್‍ನಲ್ಲಿ ಮಾತನಾಡಿದ ಚೇತನ್ ಸಿಂಗ್, ರಾಷ್ಟ್ರಗೀತೆ ಹಾಡಲು ಕಾರಣವೇನು ಎಂಬುದನ್ನ ಬಿಚ್ಚಿಟ್ಟಿದ್ದಾರೆ. ನಿನ್ನೆ ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿದ್ದಾರೆ. ನಿನ್ನೆಯ ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಶಾಂತಿ ಸುವ್ಯವಸ್ಥೆ ಕದಡಲು ಸಂಚು ರೂಪಿಸಿದ್ದರು. ಈ ವೇಳೆ ನಾನು ಪ್ರತಿಭಟನಾಕಾರ ಜೊತೆ ಮಾತುಕತೆ ಮುಂದಾದೆ ಎಂದರು.

ಪ್ರತಿಭಟನೆ ವೇಳೆ ಬಹಳಷ್ಟು ಜನರ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ನೋಡಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ರಾಷ್ಟ್ರಗೀತೆಯ ಬಗ್ಗೆ ಗೌರವ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ ನಾನು ರಾಷ್ಟ್ರಗೀತೆ ಹಾಡಿದೆ. ಇದಕ್ಕೆ ಎಲ್ಲರು ಎದ್ದು ನಿಂತು ಗೌರವ ಸೂಚಿಸಿದರು. ಕೆಲ ಪ್ರತಿಭಟನಾಕಾರರು ಪೊಲೀಸರನ್ನೇ ಟ್ಯಾಕಲ್ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಪ್ರತಿಭಟನೆಗೆ ಕರೆದಂತು ಪೊಲೀಸರನ್ನು ಟ್ಯಾಕಲ್ ಮಾಡಲು ಮುಂದಾಗಿದ್ದರು ಎಂದು ಚೇತನ್ ಸಿಂಗ್ ತಿಳಿಸಿದರು.

ನಡೆದಿದ್ದೇನು?
ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಗುರುವಾರ ಟೌನ್ ಹಾಲ್‍ನಲ್ಲಿ ಪ್ರತಿಭಟನಾಕಾರರನ್ನು ಸ್ಥಳದಿಂದ ಕಳುಹಿಸಲು ರಾಷ್ಟ್ರಗೀತೆ ಹಾಡಿದ್ದರು. ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಸ್ಥಳದಿಂದ ಎದ್ದು ನಿಂತರು. ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.

ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡಿದ ಕೆಲವೇ ಕ್ಷಣದಲ್ಲಿ ಪೌರತ್ವ ಕಾಯ್ದೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಬಳಿ ವಾದ ಮಾಡದೆ ತಾವು ಇದ್ದ ಸ್ಥಳವನ್ನು ಖಾಲಿ ಮಾಡಿದ್ದರು. ಡಿಸಿಪಿ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗಿತ್ತು ಜೊತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

Click to comment

Leave a Reply

Your email address will not be published. Required fields are marked *