ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು ಸ್ನೇಹಿತೆಗೆ ಕಿರುಕುಳ ಕೊಡುತ್ತಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ನಿತಿನ್ ಆಚಾರಿ ಬಂಧಿತ ಆರೋಪಿ. ನಿತಿನ್ ಬೆಳ್ಳಂದೂರಿನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಸಂತ್ರಸ್ತೆಯು ಈ ಹಿಂದೆ ನಿತಿನ್ ಆಚಾರಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ನಿತಿನ್ ಹಾಗೂ ಯುವತಿಯ ಮಧ್ಯೆ ಉತ್ತಮ ಸ್ನೇಹವಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಸಂತ್ರಸ್ತೆಯು ಕಂಪನಿ ತೊರೆದಿದ್ದಳು. ಇದರಿಂದ ಕೋಪಗೊಂಡ ನಿತಿನ್, ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರದು ಸಂತ್ರಸ್ತೆಯ ಫೋಟೋ ಪೋಸ್ಟ್ ಮಾಡುತ್ತಿದ್ದ. ಈ ಮೂಲಕ ಯುವತಿಯು ಅನ್ಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಬರೆದಿದ್ದ.
Advertisement
ಈ ಸಂಬಂಧ ಸಂತ್ರಸ್ತೆಯು ಸೈಬರ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಿತಿನ್ ಆಚಾರಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.